ಬಾಸೆಲ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಭಾನುವಾರ ಇಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.

ಸಿಂಧು 12–21, 5–21ರಿಂದ ತಮ್ಮ ಬದ್ಧ ಎದುರಾಳಿ, ಸ್ಪೇನ್‌ನ ಕ್ಯಾರೊಲಿನ್ ಮರಿನ್ ಅವರ ಎದುರು ಸಿಂಧು ಪರಾಭವಗೊಂಡರು. ಸಿಂಧು ಅವರು ಎರಡು ವರ್ಷಗಳ ಹಿಂದೆ ಇಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಆದರೆ ಭಾನುವಾರದ ನಡೆದ 35 ನಿಮಿಷಗಳ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ಪಾರಮ್ಯ ಮೆರೆದರು. ಈ ಋತುವಿನಲ್ಲಿ ಮರಿನ್ ಎದುರು ಸಿಂಧು ಶರಣಾದ ಮೂರನೇ ಪಂದ್ಯ ಇದಾಗಿದೆ. ಜನವರಿಯಲ್ಲಿನಡೆದಿದ್ದ ಥಾಯ್ಲೆಂಡ್ ಓಪನ್ ಸೂಪರ್ 1000 ಸರಣಿಗಳಲ್ಲಿಯೂ ಸಿಂಧು, ಮರಿನ್ ಎದುರು ಸೋತಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ 25 ವರ್ಷದ ಸಿಂಧು, 18 ತಿಂಗಳುಗಳ ನಂತರ ಮೊದಲ ಬಾರಿಗೆ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ್ದರು.

ಸ್ವಿಸ್ ಓಪನ್ ಟೂರ್ನಿಯುದ್ದಕ್ಕೂ ಉತ್ಕೃಷ್ಠ ಆಟವನ್ನು ಆಡಿದ್ದ ಸಿಂಧು ಫೈನಲ್‌ನಲ್ಲಿ ತೀವ್ರ ಒತ್ತಡಕ್ಕೊಳಗಾದಂತೆ ಕಂಡರು. ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ್ತಿ ಮರಿನ್ ಅವರ ಚುರುಕಾದ ಸ್ಮ್ಯಾಷ್ ಮತ್ತು ಡ್ರಾಪ್‌ಗಳಿಗೆ ಪ್ತತ್ಯುತ್ತರ ನೀಡುವಲ್ಲಿ ಸಿಂಧು ಯಶಸ್ವಿಯಾಗಲಿಲ್ಲ.

2016ರ ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಸಿಂಧು ಅವರನ್ನು ಮರಿನ್ ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.