ಬೆಂಗಳೂರು: ಚೆನ್ನೈನಲ್ಲಿ ಇದೇ 9ರಿಂದ ತಮಿಳುನಾಡು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್ ಪಂದ್ಯದ ವೇಳೆಗೆ ಮಯಂಕ್ ಅಗರವಾಲ್ ಸಂಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಮೂರು ದಿನಗಳ ಹಿಂದೆ ಅಗರ್ತಲಾದಿಂದ ಸೂರತ್‌ಗೆ ತೆರಳುವ ವಿಮಾನದಲ್ಲಿ ಮಯಂಕ್ ಅವರು ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿದ್ದರು. ನಂತರ ಅವರನ್ನು ಅಗರ್ತಲಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಬಾಯಿ ಮತ್ತು ಗಂಟಲಿನಲ್ಲಿ ಬೊಬ್ಬೆಗಳಾಗಿದ್ದವು. ಬುಧವಾರ ಅವರು ಬೆಂಗಳೂರಿಗೆ ಮರಳಿ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಪಡೆಯುತ್ತಿದ್ದಾರೆ.

‘ಬಾಯಿಯಲ್ಲಿ ಬೊಬ್ಬೆಗಳೆದ್ದ ಕಾರಣ ಆಹಾರ ಸೇವನೆ ಕಷ್ಟವಾಗಿತ್ತು. ಚಿಕಿತ್ಸೆಗೆ ವೇಗವಾಗಿ ಸ್ಪಂದಿಸುತ್ತಿರುವ ಮಯಂಕ್ ಚೇತರಿಸಿಕೊಳ್ಳುತ್ತಿದ್ದಾರೆ. ದ್ರವಾಹಾರವನ್ನೂ ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಂದು ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ಭರವಸೆ ಇದೆ. ಚೆನ್ನೈನಲ್ಲಿ ನಡೆಯುವ ಪಂದ್ಯದಲ್ಲಿ ಆಡಲು ಅವರು ಸಿದ್ಧರಾಗುವುದು ಬಹುತೇಕ ಖಚಿತ’ ಎಂದು ಮಯಂಕ್ ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.