ಚೆನ್ನೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕರ್ನಾಟಕ ತಂಡ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಇಲ್ಲಿರುವ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ದೇವದತ್ತ ಪಡಿಕ್ಕಲ್ (151) ಗಳಿಸಿದ ಅಮೋಘ ಶತಕ ಮತ್ತು ಆರ್.ಸಮರ್ಥ್ (57), ಹಾರ್ದಿಕ್ ರಾಜ್ (51), ಎಸ್.ಸಮರ್ಥ್ ಅವರ ಉಪಯುಕ್ತ ಆಟದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 366 ರನ್ ಗಳಿಸಿತ್ತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡ, ಕರ್ನಾಟಕದ ಬೌಲರ್ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾಯಿತು. ಈ ತಂಡದ ಮೂವರು ಮಾತ್ರವೇ ಎರಡಂಕಿ ರನ್ ಗಳಿಸಿದರು. ಬಾಬಾ ಇಂದ್ರಜಿತ್ 48 ರನ್ ಗಳಿಸಿದರೆ, ಎನ್.ಜಗದೀಶನ್ 40 ರನ್ ಕಲೆಹಾಕಿದರು. ಇವರಿಬ್ಬರ ಬಳಿಕ ವಿಮಲ್ ಕುಮಾರ್ ಗಳಿಸಿದ 14 ರನ್, ತಂಡದ ಪರ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.

ಹೀಗಾಗಿ, ತಮಿಳುನಾಡು ತಂಡದ ಇನಿಂಗ್ಸ್ 151 ರನ್ ಗಳಿಸುವಷ್ಟರಲ್ಲೇ ಮುಕ್ತಾಯವಾಯಿತು. ಇದರೊಂದಿಗೆ ಮಯಂಕ್ ಅಗರವಾಲ್ ಪಡೆಗೆ 215 ರನ್‌ಗಳ ಮುನ್ನಡೆ ಲಭಿಸಿದೆ.

ಕರ್ನಾಟಕ ಪರ ವೈಶಾಕ್ ವಿಜಯ್ ಕುಮಾರ್, ಶಶಿ ಕುಮಾರ್, ಹಾರ್ದಿಕ್ ರಾಜ್ ಮತ್ತು ವಿದ್ವತ್ ಕಾವೇರಪ್ಪ ಕ್ರಮವಾಗಿ 4, 3, 2 ಹಾಗೂ 1 ವಿಕೆಟ್ ಕಿತ್ತರು.
.ಇಂಗ್ಲೆಂಡ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೂ ಇಲ್ಲ ಕೊಹ್ಲಿ; ತಂಡ ಪ್ರಕಟಿಸಿದ BCCI.Ranji Trophy: ಕರ್ನಾಟಕ 366ಕ್ಕೆ ಆಲೌಟ್; 2ನೇ ದಿನದಂತ್ಯಕ್ಕೆ ತಮಿಳುನಾಡು 129/7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.