ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವಿನ ಕಾಯುವಿಕೆಯನ್ನು ಅಂತ್ಯಗೊಳಿಸಿತು. ಬಹಳ ವರ್ಷಗಳ ಕಾಲ ತಂಡ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿತ್ತು. 68 ಪಂದ್ಯಗಳಲ್ಲಿ 40ರಲ್ಲಿ ಗೆದ್ದು ಹಿಂದಿನ ನಾಯಕರುಗಳಿಗೆ ಸಾಧ್ಯವಾಗದ್ದನ್ನು ಮಾಡಿದ್ದರು ಎಂದು ಶಾಸ್ತ್ರಿ, ಸ್ಫೋರ್ಟ್ಸ್ ತಕ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಇನ್ನೆರಡು ವರ್ಷ ನಾಯಕರಾಗಿ ಮುಂದುವರಿದಿದ್ದರೆ ಕೊಹ್ಲಿ ಅವರು ಭಾರತದ ಟೆಸ್ಟ್ ನಾಯಕರಾಗಿ ತಮ್ಮ ಪರಂಪರೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು’ಎಂದಿದ್ದಾರೆ.

‘ಮುಂದಿನ ಎರಡು ವರ್ಷ ಭಾರತವು ತನಗಿಂತ ರ್ಯಾಂಕಿಂಗ್ನಲ್ಲಿ ಕೆಳಗಿರುವ ತಂಡಗಳ ಜೊತೆ ತವರಿನಲ್ಲಿ ಆಡಲಿದೆ. ಹಾಗಾಗಿ, ಕೊಹ್ಲಿ ಅವರು ತಮ್ಮ ನಾಯಕತ್ವದಲ್ಲಿ 50-60 ಗೆಲುವನ್ನು ಗಳಿಸುತ್ತಿದ್ದರು. ಅದು ಬಹಳಷ್ಟು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’ಎಂದು ಶಾಸ್ತ್ರಿ ಹೇಳಿದ್ದಾರೆ.

ಆದರೆ, ಸುದೀರ್ಘ ಅವಧಿಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

‘ವಿರಾಟ್ ಕೊಹ್ಲಿ 5-6 ವರ್ಷಗಳ ಕಾಲ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದರು. ಅದರಲ್ಲಿ ಐದು ವರ್ಷ ಭಾರತವು ನಂ. 1 ಆಗಿತ್ತು. ಯಾವುದೇ ಭಾರತೀಯ ನಾಯಕನು ಈ ರೀತಿಯ ದಾಖಲೆಯನ್ನು ಹೊಂದಿಲ್ಲ. ಈ ರೀತಿಯ ದಾಖಲೆಯನ್ನು ಹೊಂದಿರುವ ವಿಶ್ವದ ಬೆರಳೆಣಿಕೆಯಷ್ಟು ನಾಯಕರಿದ್ದಾರೆ. 68 ಪಂದ್ಯಗಳಲ್ಲಿ 40 ಗೆಲುವಿನ ದಾಖಲೆಯನ್ನು ಯಾರೂ ಹೊಂದಿಲ್ಲ’ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.