ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಮೆಂಟರ್, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಭಾನುವಾರ ನಡೆದ ಐಪಿಎಲ್ ಪಂದ್ಯದ ವೇಳೆ ಕೆಲಹೊತ್ತು ಡ್ರೆಸಿಂಗ್ ಕೊಠಡಿಯಲ್ಲಿ ಕುಳಿತಿದ್ದರು.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದೊಂದಿಗೆ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಮಗ ಅರ್ಜುನ್ ಅವರು ಒತ್ತಡಕ್ಕೆ ಒಳಗಾಗದೆ ಸಹಜ ಆಟ ಆಡಬೇಕು ಎಂಬುದು ಇದರ ಹಿಂದಿನ ಉದ್ಧೇಶವಾಗಿತ್ತು.

ಮುಂಬೈ ಇಂಡಿಯನ್ಸ್ನ ಇತರ ಪಂದ್ಯಗಳ ವೇಳೆ ಸಚಿನ್ ಡಗ್ಔಟ್ನಲ್ಲಿ ಕುಳಿತಿರುತ್ತಿದ್ದರು. ಆದರೆ ಭಾನುವಾರದ ಪಂದ್ಯದಲ್ಲಿ ಕೆಕೆಆರ್ ಇನಿಂಗ್ಸ್ನ ಆರಂಭದ ಕೆಲವು ಓವರ್ಗಳಲ್ಲಿ ಅವರು ಡಗ್ಔಟ್ನಲ್ಲಿ ಕಾಣಿಸಿಕೊಳ್ಳಲಿಲ್ಲ.

‘ಡಗ್ಔಟ್ನಲ್ಲಿ ಕುಳಿತರೆ ನನ್ನನ್ನು ಅಂಗಳದ ಬೃಹತ್ ಪರದೆಯಲ್ಲಿ ತೋರಿಸುತ್ತಿದ್ದರು. ನಾನು ಗಮನಿಸುತ್ತಿದ್ದೇನೆ ಎಂಬ ಕಾರಣ ಅರ್ಜುನ್ ತನ್ನ ಸಹಜ ಆಟದಿಂದ ದೂರ ಹೋಗುವ ಸಾಧ್ಯತೆಯಿತ್ತು. ಆದ್ದರಿಂದ ಡ್ರೆಸಿಂಗ್ ಕೊಠಡಿಯೊಳಗೆ ಕುಳಿತೆ’ ಎಂದು ಸಚಿನ್ ಹೇಳಿದರು.

‘ಇದು ಹೊಸ ಅನುಭವ ನೀಡಿತು. ಅರ್ಜುನ್ ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡುವುದನ್ನು ನಾನು ಇದುವರೆಗೆ ನೋಡಿರಲಿಲ್ಲ’ ಎಂದು ತಿಳಿಸಿದರು.

ಐಪಿಎಲ್ನಲ್ಲಿ ಆಡಿದ ಅಪ್ಪ–ಮಗನ ಮೊದಲ ಜೋಡಿ ಎಂಬ ಗೌರವ ಸಚಿನ್ ಹಾಗೂ ಅರ್ಜುನ್ಗೆ ದೊರೆತಿದೆ. 6 ವರ್ಷ ಆಟಗಾರನಾಗಿ ಮುಂಬೈ ತಂಡದಲ್ಲಿದ್ದ ಸಚಿನ್, ಕಳೆದ 10 ವರ್ಷಗಳಿಂದ ಮೆಂಟರ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.