ಪುದುಚೇರಿ: ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಅವರನ್ನು ಪುದುಚೇರಿ ಕ್ರಿಕೆಟ್ ತಂಡವು ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಪುದುಚೇರಿ ಕ್ರಿಕೆಟ್ ಸಂಸ್ಥೆಯ (ಸಿಎಪಿ) ಮೂಲಗಳು ಶನಿವಾರ ಈ ವಿಷಯ ತಿಳಿಸಿವೆ.

ತಂಡದ ಮುಖ್ಯ ಕೋಚ್ ದಿಶಾಂತ್ ಯಾಗ್ನಿಕ್, ವ್ಯವಸ್ಥಾಪಕ ಮತ್ತು ಸ್ಟ್ರೆಂಥ್ ಆ್ಯಂಡ್ ಕಂಡೀಶನಿಂಗ್ ಕೋಚ್ ಕಲ್ಪೇಂದ್ರ ಜಾ ಅವರೊಂದಿಗೆ ಟೈಟ್ ಕಾರ್ಯನಿರ್ವಹಿಸಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ಅವರು ತಂಡವನ್ನು ಸೇರು ವರು ಎಂದು ಮೂಲಗಳು ಹೇಳಿವೆ.

ಟೈಟ್ ಅವರು ಆಸ್ಟ್ರೇಲಿಯಾ ತಂಡದ ಪರ ಮೂರು ಟೆಸ್ಟ್, 35 ಏಕದಿನ ಮತ್ತು 21 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನೂ ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.