ಬೆಂಗಳೂರು: ಕ್ರಿಕೆಟ್ ವಲಯದಲ್ಲಿ ಶಿಖರ್ ಧವನ್ ಅವರ ಬಗ್ಗೆ ಯಾರನ್ನಾದರೂ ಕೇಳಿ ನೋಡಿ. ಅವರ ಎಡಗೈ ಬ್ಯಾಟಿಂಗ್ ಸೊಬಗಿನ ಬಗ್ಗೆ ಕೊನೆಯಲ್ಲಿ ಮಾತನಾಡುತ್ತಾರೆ. ಮೊದಲಿಗೆ ಅವರ ಸ್ನೇಹಭರಿತ ನಡವಳಿಕೆ ಮತ್ತು ಮೀಸೆ ತಿರುವಿ ತೊಡೆ ತಟ್ಟುವ ಶೈಲಿಯ ಬಗ್ಗೆ ಮನತುಂಬಿ ವಿವರಿಸುತ್ತಾರೆ.

ಅಭಿಮಾನಿಗಳಷ್ಟೇ ಅಲ್ಲ. ಶಿಖರ್ ಓರಗೆಯ ಆಟಗಾರರು, ಕುಟುಂದವರು, ಆಪ್ತರು ಮತ್ತು ಕೋಚ್ಗಳಿಂದಲೂ ಇವೇ ಮಾತುಗಳು ಬರುತ್ತವೆ. ಆಟದ ಮೂಲಕ ತಾವು ಪ್ರತಿನಿಧಿಸಿದ ತಂಡವನ್ನು ಹಲವು ಬಾರಿ ಗೆಲ್ಲಿಸಿದ್ದಾರೆ. ಆದರೆ ತಾವು ಕಾಲಿಟ್ಟಲೆಲ್ಲ ನಗುವಿನ ಮಿಂಚು ಹರಿಸುತ್ತ ಸ್ನೇಹಬಳಗವನ್ನು ಕಟ್ಟಿಕೊಂಡಿದ್ದಾರೆ. ಮೊದಲ ಭೇಟಿಯಲ್ಲಿಯೇ ಮರೆಯಲಾಗದ ಛಾಪು ಮೂಡಿಸುವಂತಹ ವ್ಯಕ್ತಿತ್ವ ಅವರದ್ದು. ಅಭಿಮಾನಿ ವಲಯದಲ್ಲಿ ‘ಗಬ್ಬರ್’ ಎಂದೇ ಚಿರಪರಿಚಿತರು. ಶನಿವಾರ ಅವರು ಕ್ರಿಕೆಟ್ನ ಎಲ್ಲ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕೀಟಲೆಯ ವಿಡಿಯೋಗಳ (ಮಗ ಝೋರಾವರ್ ಮತ್ತು ಅಪ್ಪಮಹೇದ್ರ ಪಾಲ್ ಅವರೊಂದಿಗೆ ಮಾಡಿದ್ದು) ಮೂಲಕ ನಗೆಯುಕ್ಕಿಸುತ್ತಿದ್ದವರು ಶಿಖರ್. ಇದೀಗ ತಮ್ಮ ವಿದಾಯವನ್ನೂ ಸಾಮಾಜಿಕ ತಾಣಗಳ ಮೂಲಕವೇ ಘೋಷಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿ ಅವರು ಭಾವುಕರಾದಂತೆ ಕಂಡರು. ಸುಮಾರು 20 ವರ್ಷಗಳ ಕ್ರಿಕೆಟ್ ನಂಟಿಗೆ ವಿದಾಯ ಹೇಳುವಾಗ ಮನಸ್ಸು ಭಾರವಾಗಿದ್ದನ್ನು ಅವರ ಮಾತುಗಳು ಬಿಂಬಿಸಿವೆ. ತಮ್ಮ ಬಾಲ್ಯದ ಕೋಚ್ ತಾರಕ್ ಸಿನ್ಹಾ, ಮದನ್ ಶರ್ಮಾ ಅವರೂ ಸೇರಿದಂತೆ ತಮ್ಮ ಬೆಳವಣಿಗೆಗೆ ಕಾರಣರಾದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಜೀವನದಲ್ಲಿ ಹೊಸ ಅಧ್ಯಾಯ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದ ಶಿಖರ್ ಶಾಲೆಯ ದಿನಗಳಲ್ಲಿಯೇ ಕ್ರಿಕೆಟ್ನತ್ತ ಆಕರ್ಷಿತರಾದವರು. ವಿಕೆಟ್ಕೀಪಿಂಗ್ ಮಾಡುತ್ತಿದ್ದ ಶಿಖರ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಗರಡಿಯಲ್ಲಿ ಪಳಗಿದರು. ಅಲ್ಲಿ ಅವರಿಗೆ ವಿಕೆಟ್ಕೀಪಿಂಗ್ ಬಿಡಿಸಿ ಆರಂಭಿಕ ಬ್ಯಾಟರ್ ಆಗುವ ಸಂದರ್ಭ ಒದಗಿತು. ಈ ಹುಡುಗನ ಮುಂಗೈ ಮತ್ತು ತೋಳಿನ ಶಕ್ತಿಯುತ ಚಲನೆಯು ಅಪರೂಪದ್ದಾಗಿತ್ತು. ಹಲವು ಬ್ಯಾಟರ್ಗಳು ಕಷ್ಟಪಟ್ಟು ಆಡುತ್ತಿದ್ದ ಹೊಡೆತಗಳನ್ನು ಶಿಖರ್ ಲೀಲಾಜಾಲವಾಗಿ ಪ್ರಯೋಗಿಸುತ್ತಿದ್ದರು. ಅವರ ಕವರ್ ಡ್ರೈವ್ ನೋಡಿದ ಕೋಚ್ಗಳೇ ನಿಬ್ಬೆರಗಾಗುತ್ತಿದ್ದರು.

‘ಅದೊಂದು ಸಲ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 17 ವರ್ಷದೊಳಗಿನವರ ರಾಷ್ಟ್ರೀಯ ಟೂರ್ನಿಯ ಪಂದ್ಯ ನಡೆದಿತ್ತು. ಜಮ್ಮು–ಕಾಶ್ಮೀರ ಎದುರಿನ ಆ ಪಂದ್ಯದಲ್ಲಿ ಶಿಖರ್ ಶತಕ ಹೊಡೆದರು. ಆಗ ತಂಡದ ವ್ಯವಸ್ಥಾಪಕರು ನನಗೆ ಕರೆ ಮಾಡಿ, ನಿಮ್ಮ ಶಿಷ್ಯ ಶತಕ ಹೊಡೆದು ಆಡುತ್ತಿದ್ದಾನೆ. ಬಹಳ ಅದ್ಭುತ ಆಟ ಮುಂದುವರಿದಿದೆ. ಬಂದು ನೋಡಿ ಎಂದರು. ನಾನು ಸುಮಾರು 40 ನಿಮಿಷದಲ್ಲಿ ಅಲ್ಲಿಗೆ ತಲುಪಿದ್ದೆ. ಅಷ್ಟರಲ್ಲಿಯೇ ಶಿಖರ್ ಸ್ಕೋರ್ 221 ಆಗಿತ್ತು. ಆ ವೇಗ ನೋಡಿ ಅಚ್ಚರಿಯಾಗಿತ್ತು’ ಎಂದು ಅವರ ಬಾಲ್ಯದ ಕೋಚ್ ಮದನ್ ಶರ್ಮಾ ನೆನಪಿಸಿಕೊಳ್ಳುತ್ತಾರೆ.

2004ರಲ್ಲಿ ದೆಹಲಿ ತಂಡದ ಪರ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ ಶಿಖರ್, ಭಾರತ ತಂಡದಲ್ಲಿ ಆಡಲು 9 ವರ್ಷ ಕಾಯಬೇಕಾಯಿತು. ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾಗಿದ್ದ ದೆಹಲಿಯ ವಿರಾಟ್ ಕೊಹ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ನಾಲ್ಕು ವರ್ಷಗಳ ನಂತರ ಶಿಖರ್ ಸ್ಥಾನ ಪಡೆದಿದ್ದರು.

2013ರಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಅವರು ಶತಕ ದಾಖಲಿಸಿದರು. ಆಗ ನಾಯಕರಾಗಿದ್ದ ಮಹೇಂದ್ರಸಿಂಗ್ ಧೋನಿಯ ಮನಗೆದ್ದರು.

ಫಿಫ್ಟಿ–50 ಮಾದರಿಯ ಹೀರೊ

ಶಿಖರ್ ಟೆಸ್ಟ್ ಮತ್ತು ಟಿ20 ಮಾದರಿಗಳಿಗಿಂತ ಹೆಚ್ಚು ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಮಿಂಚಿದವರು. 44.11ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದರು. 2013ರ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಅವರ ಕೊಡುಗೆ ದೊಡ್ಡದು. ಟೂರ್ನಿಯ ಶ್ರೇಷ್ಠ ಆಟಗಾರ ಗೌರವ ಗಳಿಸಿದ್ದರು. ಇಂಗ್ಲೆಂಡ್ ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ 363 ರನ್ ಕಲೆಹಾಕಿದ್ದರು.

ಅವರ ವೃತ್ತಿಜೀವನದಲ್ಲಿ ದಾಖಲಾದ ಒಂದೊಂದು ಶತಕವೂ ಆಕರ್ಷಕವಾಗಿದ್ದವು. ಅದರಲ್ಲೂ 2015ರ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎದುರು ಗಳಿಸಿದ್ದ 137 ರನ್ ಅತ್ಯಂತ ವಿಶೇಷವಾದದ್ದು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಡೇಲ್ ಸ್ಟೇಯ್ನ್ ಮತ್ತು ಮಾರ್ನ್ ಮಾರ್ಕೆಲ್ ಅವರಿದ್ದ ಎದುರಾಳಿ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸಿದ್ದರು.

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರು ಒವಲ್ ಕ್ರೀಡಾಂಗಣದಲ್ಲಿ 117 (109ಎ) ಗಳಿಸಿದ್ದರು. ಆದರೆ ಅವರು ನಂತರದ ದಿನಗಳಲ್ಲಿ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಹಿಂದೆ ಬಿದ್ದರು.

ಶಿಖರ್ ಅವರು ಇಷ್ಟು ವರ್ಷಗಳಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಶೇ 50ರಷ್ಟನ್ನು ಮಾತ್ರ ತೋರಿಸಿದ್ದಾರೆ. ಅವರಲ್ಲಿ ಇನ್ನಷ್ಟು ಸಾಧನೆ ಮಾಡುವ ಸಾಮರ್ಥ್ಯವಿತ್ತು. ಆದರೆ ಸಿಕ್ಕ ಕಾಲ ಮತ್ತು ಅವಕಾಶ ಎರಡೂ ಕಡಿಮೆ ಎಂಬುದು ಅವರ ಆಪ್ತವಲಯದವರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.