ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಮೂರು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್ ಎನಿಸಿದರು.

ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುನ್ನಡೆಸಿದ್ದರು. ಈ ಪಂದ್ಯದಿಂದ ಬ್ರಾಡ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು. ಪಂದ್ಯವನ್ನು ಪ್ರವಾಸಿ ಪಡೆ 4 ವಿಕೆಟ್ ಅಂತರದಲ್ಲಿ ಗೆದ್ದುಕೊಂಡಿದ್ದರಿಂದ ನಾಯಕನ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿತ್ತು. ಅದಾದನಂತರ ಉಳಿದ ಪಂದ್ಯಗಳಲ್ಲಿ ಸ್ಥಾನ ಗಳಿಸಿದ ಬ್ರಾಡ್, ಸಾಮರ್ಥ್ಯ ಸಾಬೀತು ಮಾಡಿದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ ಅವರು ಸರಣಿ ಶ್ರೇಷ್ಠ ಎನಿಸಿದರು.

ಕೊರೊನಾ ಕಾಲದ ಮೊಟ್ಟಮೊದಲ ಟೆಸ್ಟ್ ಸರಣಿಯನ್ನುಇಂಗ್ಲೆಂಡ್ 2–1 ಅಂತರದಿಂದ ಗೆದ್ದು ಬೀಗಿತು.

ಇದನ್ನೂ ಓದಿ:ಇಂಗ್ಲೆಂಡ್ಗೆ ಕೊರೊನಾ ಕಾಲದ ಮೊದಲ ’ಕಿರೀಟ’

2007ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಬ್ರಾಡ್ ಖಾತೆಯಲ್ಲಿಈ ಸರಣಿಗೂ ಮುನ್ನ485 ವಿಕೆಟ್ಗಳಿದ್ದವು. ಎರಡನೇ ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ಪಡೆದ ಬ್ರಾಡ್, ಮೂರನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 6 ಹಾಗೂ ಎರಡನೇ ಇನಿಂಗ್ಸ್ನಲ್ಲಿ 4 ವಿಕೆಟ್ ಉರುಳಿಸಿದರು. ಮಾತ್ರವಲ್ಲದೆ, ಮೊದಲ ಇನಿಂಗ್ಸ್ನಲ್ಲಿ 62 ರನ್ ಗಳಿಸಿ ಬ್ಯಾಟಿಂಗ್ನಲ್ಲೂ ಮಿಂಚಿದರು. ಇದರೊಂದಿಗೆ ತಮ್ಮ 140ನೇ ಟೆಸ್ಟ್ ಪಂದ್ಯದ 258ನೇ ಇನಿಂಗ್ಸ್ನಲ್ಲಿ 501 ವಿಕೆಟ್ ಪಡೆದ ಸಾಧನೆ ಮಾಡಿದರು.

ಟೆಸ್ಟ್ ಕ್ರಿಕೆಟ್ನಲ್ಲಿ 500ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು

ಬೌಲರ್

ದೇಶ

ಪಂದ್ಯ

ವಿಕೆಟ್

ಮುತ್ತಯ್ಯ ಮುರುಳಿಧರನ್

ಶ್ರೀಲಂಕಾ

133

800

ಶೇನ್ ವಾರ್ನ್

ಆಸ್ಟ್ರೇಲಿಯಾ

145

708

ಅನಿಲ್ ಕುಂಬ್ಳೆ

ಭಾರತ

132

619

ಜೇಮ್ಸ್ ಆ್ಯಂಡರ್ಸನ್

ಇಂಗ್ಲೆಂಡ್

153

589

ಗ್ಲೇನ್ಮೆಕ್ಗ್ರಾತ್

ಆಸ್ಟ್ರೇಲಿಯಾ

124

563

ಕರ್ಟ್ನಿ ವಾಲ್ಷ್

ವೆಸ್ಟ್ ಇಂಡೀಸ್

132

519

ಸ್ಟುವರ್ಟ್ ಬ್ರಾಡ್*

ಇಂಗ್ಲೆಂಡ್

140

500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.