ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಹಿರಿಯ ಕ್ರಿಕೆಟಿಗ, ಕರ್ನಾಟಕದ ಸುನಿಲ್ ಜೋಶಿ ಅರ್ಜಿ ಹಾಕಿದ್ದಾರೆ.

‘ಬೌಲಿಂಗ್ ಕೋಚ್ ಹುದ್ದೆಗೆ ನೇಮಕ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಬಾಂಗ್ಲಾದೇಶ ತಂಡಕ್ಕೆ ಎರಡೂವರೆ ವರ್ಷ ಕೆಲಸ ಮಾಡಿದ್ದು ತೃಪ್ತಿ ನೀಡಿದೆ. ಇದೀಗ ನನ್ನ ತಾಯ್ನಾಡಿನ ತಂಡಕ್ಕೆ ಸೇವೆ ಮಾಡಲು ಸಿದ್ಧವಾಗಿದ್ಧೇನೆ. ಈಗಿನ ತಂಡಕ್ಕೆ ಸ್ಪಿನ್ ಬೌಲಿಂಗ್ ಪರಿಣತ ಕೋಚ್ ಅಗತ್ಯವಿದೆ. ನನ್ನ ಅನುಭವಕ್ಕೆ ಮಾನ್ಯತೆ ದೊರೆಯುವ ವಿಶ್ವಾಸವಿದೆ’ ಎಂದು ಜೋಶಿ ಹೇಳಿದ್ದಾರೆ.

ಗದುಗಿನ ಸುನಿಲ್ ಜೋಶಿ ಅವರು 1996 ರಿಂದ 2001ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 15 ಟೆಸ್ಟ್ಗಳಿಂದ 41 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 69 ವಿಕೆಟ್ಗಳನ್ನು ಗಳಿಸಿದ್ದಾರೆ. ಅವರು 160 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು. 615 ವಿಕೆಟ್ಗಳನ್ನು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.