ವಿಶಾಖಪಟ್ಟಣ: ಬಾಂಗ್ಲಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಒಂದೇ ಪಂದ್ಯದಲ್ಲಿ ಆಡಿ ಬಂದಿರುವ ಮನೀಷ್ ಪಾಂಡೆ ರನ್ ಹಸಿವು ನೀಗಿಲ್ಲ. ಅದರ ಪರಿಣಾಮ ಮಂಗಳವಾರ ಇಲ್ಲಿ ಸರ್ವಿಸಸ್ ತಂಡದ ಬೌಲರ್ಗಳಿಗೆ ಸಿಂಹಸ್ವಪ್ನವಾದರು. ಸ್ಫೋಟಕ ಶತಕ ಸಿಡಿಸಿದರು.

ಡಾ. ಪಿ.ವಿ.ಜಿ. ರಾಜು ಎಸಿಎ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅವರು ಗಳಿಸಿದ ಶರವೇಗದ ಶತಕದ (ಔಟಾಗದೆ 129; 54ಎಸೆತ, 12ಬೌಂಡರಿ, 10ಸಿಕ್ಸರ್) ಬಿರುಗಾಳಿಗೆ ಸರ್ವಿಸಸ್ ತಂಡವು 80 ರನ್ಗಳಿಂದ ಸೋತಿತು.

ಟಾಸ್ ಗೆದ್ದ ಸರ್ವಿಸಸ್ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಮೊದಲ ಓವರ್ನಲ್ಲಿಯೇ ರೋಹನ್ ಕದಂ (4ರನ್) ವಿಕೆಟ್ ಕಬಳಿಸಿದ ದಿವೇಶ್ ಪಠಾಣಿಯಾ ಸಂಭ್ರಮಿಸಿದರು.

ಅದರ ನಂತರ ಸರ್ವಿಸಸ್ ಬಳಗಕ್ಕೆ ಸಡಗರ ಪಡುವ ಅವಕಾಶವನ್ನು ಎಡಗೈ ಬ್ಯಾಟ್ಸ್ಮನ್ ದೇವದತ್ತ ಪಡಿಕ್ಕಲ್ (75; 43ಎಸೆತ, 8ಬೌಂಡರಿ, 4ಸಿಕ್ಸರ್) ಮತ್ತು ನಾಯಕ ಪಾಂಡೆ ಕೊಡಲೇ ಇಲ್ಲ. ಅವರಿಬ್ಬರ ಅಬ್ಬರದ ಆಟದಿಂದ ಕರ್ನಾಟಕ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 250 ರನ್ಗಳ ಬೃಹತ್ ಮೊತ್ತ ಪೇರಿಸಿತು.

ಗುರಿ ಬೆನ್ನತ್ತಿದ್ದ ಸರ್ವಿಸಸ್ ತಂಡವು ಕರ್ನಾಟಕ ಸ್ಪಿನ್ನರ್ ಶ್ರೇಯಸ್ ಗೋಪಾಲ್ (19ಕ್ಕೆ5) ದಾಳಿಗೆ ಕುಸಿಯಿತು. 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 170 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ರವಿ ಚವ್ಹಾಣ್ (54; 35ಎ, 5ಬೌಂ, 2ಸಿಕ್ಸರ್) ಮತ್ತು ರಜತ್ ಪಲಿವಾಲ (ಔಟಾಗದೆ 46, 30ಎ, 4ಬೌಂ, 1ಸಿ) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಮನೀಷ್ ಎರಡನೇ ಶತಕ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಶತಕ ಹೊಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯ ಮನೀಷ್ ಪಾಂಡೆ ಅವರಿಗೆ ಇದೆ. ದೇಶಿ ಚುಟುಕು ಟೂರ್ನಿಯಲ್ಲಿಯೂ ಅವರು ಎರಡನೇ ಶತಕ ಬಾರಿಸಿದರು. ಈ ಸಾಧನೆ ಮಾಡಿದ ಕರ್ನಾಟಕದ ಎರಡನೇ ಆಟಗಾರನಾದರು. ಕರುಣ್ ನಾಯರ್ ಈ ಸಾಧನೆ ಮಾಡಿರುವ ಮೊದಲ ಆಟಗಾರ.

ಮನೀಷ್, ಈ ಟೂರ್ನಿಯ ಇತಿಹಾಸದಲ್ಲಿ ಅತಿದೊಡ್ಡ ವೈಯಕ್ತಿಕ ಸ್ಕೋರ್ ದಾಖಲಿಸಿದ ಎರಡನೇ ಬ್ಯಾಟ್ಸ್ಮನ್ ಆಗಿ ದ್ದಾರೆ. ಶ್ರೇಯಸ್ ಅಯ್ಯರ್ (147) ಮೊದಲ ಸ್ಥಾನ ದಲ್ಲಿದ್ದಾರೆ. ಈಚೆಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕವು ಚಾಂಪಿಯನ್ ಆಗಲು ಮನೀಷ್ ಆಟವೂ ಪ್ರಮುಖವಾಗಿತ್ತು. ಅದರಲ್ಲಿಯೂ ರನ್ ಹೊಳೆ ಹರಿಸಿದ್ದರು.

ಭಾರತ ತಂಡದಿಂದ ತವರಿಗೆ ಮರಳಿರುವ ಪಾಂಡೆ ಈ ಶತಕ ವಿಶೇಷವಾದದ್ದು. ಅವರು ದೇವದತ್ತ ಜೊತೆ ಎರಡನೇ ವಿಕೆಟ್ಗೆ 167 ರನ್ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಬೃಹತ್ ಮೊತ್ತ ಗಳಿಸಲು ಸಾಧ್ಯ ವಾಯಿತು. ಸೋಮವಾರ ಆಂಧ್ರದ ಎದುರಿನ ಪಂದ್ಯದಲ್ಲಿ ದೇವದತ್ತ ಶತಕ ಗಳಿಸಿದ್ದರು. ಸರ್ವಿಸಸ್ ಬೌಲರ್ಗಳನ್ನು ಬಹಳಷ್ಟು ಕಾಡಿದ ಅವರು ಮತ್ತೊಂದು ಶತಕದತ್ತ ಹೆಜ್ಜೆ ಇಟ್ಟಿದ್ದರು. 15ನೇ ಓವರ್ನಲ್ಲಿ ಅವರ ವಿಕೆಟ್ ಗಳಿಸಿದ ವಿಕಾಸ್ ಯಾದವ್ ಜೊತೆಯಾಟವನ್ನು ಮುರಿದರು. ಆದರೆ, ಅಬ್ಬರದ ಆಟ ಮುಂದುವರಿಸಿದ ಪಾಂಡೆ ತಂಡದ ಮೊತ್ತ ಹೆಚ್ಚಿಸಿದರು.

ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತು. ತನ್ನ ಐದನೇ ಪಂದ್ಯವನ್ನು ನ.15ರಂದು ಬಿಹಾರ ತಂಡದ ಎದುರು ಆಡಲಿದೆ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ:20 ಓವರ್ಗಳಲ್ಲಿ 3ಕ್ಕೆ250 (ದೇವದತ್ತ ಪಡಿಕ್ಕಲ್ 75, ಮನೀಷ್ ಪಾಂಡೆ ಅಜೇಯ 129, ಕೃಷ್ಣಪ್ಪ ಗೌತಮ್ 23, ದಿವೇಶ್ ಪಠಾಣಿಯಾ 28ಕ್ಕೆ1, ಮೋಹಿತ್ ಕುಮಾರ್ 53ಕ್ಕೆ1, ವಿಕಾಸ್ ಯಾದವ್ 47ಕ್ಕೆ1) ಸರ್ವಿಸಸ್: 20 ಓವರ್ಗಳಲ್ಲಿ 7ಕ್ಕೆ170 (ರವಿ ಚವ್ಹಾಣ್ 54, ಅನ್ಷುಲ್ ಗುಪ್ತಾ 29, ರಜತ್ ಪಲಿವಾಲ ಔಟಾಗದೆ 46, ಶ್ರೇಯಸ್ ಗೋಪಾಲ್ 19ಕ್ಕೆ5, ಕೃಷ್ಣಪ್ಪ ಗೌತಮ್ 48ಕ್ಕೆ1, ವಿ. ಕೌಶಿಕ್ 6ಕ್ಕೆ1)

ಫಲಿತಾಂಶ: ಕರ್ನಾಟಕ ತಂಡಕ್ಕೆ 80 ರನ್ಗಳ ಜಯ.

ಸಂಕ್ಷಿಪ್ತ ಸ್ಕೋರು:

’ಎ’ ಗುಂಪು: ಕರ್ನಾಟಕ:20 ಓವರ್ಗಳಲ್ಲಿ 3ಕ್ಕೆ250 (ದೇವದತ್ತ ಪಡಿಕ್ಕಲ್ 75, ಮನೀಷ್ ಪಾಂಡೆ ಅಜೇಯ 129, ಕೃಷ್ಣಪ್ಪ ಗೌತಮ್ 23, ದಿವೇಶ್ ಪಠಾಣಿಯಾ 28ಕ್ಕೆ1, ಮೋಹಿತ್ ಕುಮಾರ್ 53ಕ್ಕೆ1, ವಿಕಾಸ್ ಯಾದವ್ 47ಕ್ಕೆ1) ಸರ್ವಿಸಸ್: 20 ಓವರ್ಗಳಲ್ಲಿ 7ಕ್ಕೆ170 (ರವಿ ಚವ್ಹಾಣ್ 54, ಅನ್ಷುಲ್ ಗುಪ್ತಾ 29, ರಜತ್ ಪಲಿವಾಲ ಔಟಾಗದೆ 46, ಶ್ರೇಯಸ್ ಗೋಪಾಲ್ 19ಕ್ಕೆ5, ಕೃಷ್ಣಪ್ಪ ಗೌತಮ್ 48ಕ್ಕೆ1, ವಿ. ಕೌಶಿಕ್ 6ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 80 ರನ್ಗಳ ಜಯ.

ಆಂಧ್ರ: 20 ಓವರ್ಗಳಲ್ಲಿ 6ಕ್ಕೆ168 (ಶ್ರೀಕರ್ ಭರತ್ 21, ಪ್ರಶಾಂತಕುಮಾರ್ 45, ಕ್ರಾಂತಿಕುಮಾರ್ 47, ನರೇನ್ ರೆಡ್ಡಿ 21, ಲಕ್ಮನ್ ಮೆರಿವಾಲಾ 22ಕ್ಕೆ3) ಬರೋಡಾ: 18.5 ಓವರ್ಗಳಲ್ಲಿ 3ಕ್ಕೆ172 (ಕೇದಾರ್ ದೇವಧರ್ 49, ಆದಿತ್ಯ ವಾಘ್ಮೋಡೆ 82, ನರೇನ್ ರೆಡ್ಡಿ 24ಕ್ಕೆ1, ಚೀಪುರಪಳ್ಳಿ ಸ್ಟೀಫನ್ 25ಕ್ಕೆ1, ಮನೀಷ್ ಗೋಳಮಾರು 31ಕ್ಕೆ1) ಫಲಿತಾಂಶ: ಬರೋಡಾಕ್ಕೆ 7 ವಿಕೆಟ್ಗಳ ಜಯ.

ಗೋವಾ: 20 ಓವರ್ಗಳಲ್ಲಿ 9ಕ್ಕೆ119 (ಸ್ನೇಹಲ್ ಸುಹಾಸ್ ಕೌತಣಕರ್ 57, ಹೇರಂಭ ಪರಬ್ ಔಟಾಗದೆ 22, ಮಯಂಕ್ ಮಿಶ್ರಾ 6ಕ್ಕೆ4, ಸನ್ನಿ ರಾಣಾ 30ಕ್ಕೆ2, ರಾಹಿಲ್ ಶಾ 20ಕ್ಕೆ2) ಉತ್ತರಾಖಂಡ: 16.4 ಓವರ್ಗಳಲ್ಲಿ 2ಕ್ಕೆ120 (ಕರ್ಣವೀರ್ ಕೌಶಲ್ 35, ತನ್ಮಯ್ ಶ್ರೀವಾಸ್ತವ್ ಔಟಾಗದೆ 49, ಸೌರಭ್ ರಾವತ್ ಔಟಾಗದೆ 31, ಅಮೂಲ್ಯ ಪಾಂಡೇಕರ್ 20ಕ್ಕೆ1) ಫಲಿತಾಂಶ: ಉತ್ತರಾಖಂಡಕ್ಕೆ 8 ವಿಕೆಟ್ಗಳ ಜಯ.

ಬಿ ಗುಂಪು: ವಿದರ್ಭ: 13 ಓವರ್ಗಳಲ್ಲಿ 9ಕ್ಕೆ99 (ಅಕ್ಷಯ್ ಕೊಲ್ಹಾರ್ 24, ದೀಪಕ್ ಚಾಹರ್ 18ಕ್ಕೆ4) ರಾಜಸ್ಥಾನ:13 ಓವರ್ಗಳಲ್ಲಿ 8ಕ್ಕೆ105 (ಮಣಿಂದರ್ ಸಿಂಗ್ 44, ಅಕ್ಷಯ್ ವಖ್ರೆ 15ಕ್ಕೆ3) ಫಲಿತಾಂಶ:ವಿದರ್ಭ ತಂಡಕ್ಕೆ 1 ರನ್ ಜಯ (ವಿಜೆಡಿ ಪದ್ಧತಿ).

ಕೇರಳ: 20 ಓವರ್ಗಳಲ್ಲಿ 9ಕ್ಕೆ149 (ವಿಷ್ಣು ವಿನೋದ್ 25, ಸಚಿನ್ ಬೇಬಿ 48, ರಾಬಿನ್ ಉತ್ತಪ್ಪ 29, ಥಾಮಸ್ ಮಾಯಿರೆಂಬೆಮ್ 35ಕ್ಕೆ3, ವಿಶ್ವಜೀತ್ ಕೊನಾವುಜಮ್ 28ಕ್ಕೆ3, ಅಜಯ್ ಸಿಂಗ್ 16ಕ್ಕೆ2) ಮಣಿಪುರ: 20 ಓವರ್ಗಳಲ್ಲಿ 7ಕ್ಕೆ74 (ಜಾನ್ಸನ್ ಸಿಂಗ್ 27, ಸುದೇಶ್ಣ್ ಮಿಥುನ್ 5ಕ್ಕೆ4) ಫಲಿತಾಂಶ: ಕೇರಳ ತಂಡಕ್ಕೆ 75 ರನ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.