ಮೆಲ್ಬರ್ನ್: 'ಆ ರೀತಿಯಲ್ಲಿ ಸಿಕ್ಸರ್ ಹೊಡೆಯುವುದು ವಿರಾಟ್ ಕೊಹ್ಲಿ ಅವರಿಂದ ಮಾತ್ರ ಸಾಧ್ಯ’ ಎಂದು ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು, ಕೊಹ್ಲಿ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೊನೆಯ 8 ಎಸೆತಗಳಲ್ಲಿ 28 ರನ್ಗಳು ಬೇಕಿದ್ದವು. ಹ್ಯಾರಿಸ್ ರವೂಫ್ ಬೌಲ್ ಮಾಡಿದ 19ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಕೊಹ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದ್ದರು. ಇದರಿಂದ ಅಂತಿಮ ಓವರ್ನಲ್ಲಿ ಗಳಿಸುವ ರನ್ 16ಕ್ಕೆ ಇಳಿಕೆಯಾಗಿತ್ತು. ರವೂಫ್ ಬೌಲಿಂಗ್ನಲ್ಲಿ ಕೊಹ್ಲಿ, ಅತಿಯಾದ ಒತ್ತಡದ ನಡುವೆಯೂ ಸಿಕ್ಸರ್ ಹೊಡೆದದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

‘ನಾನೂ ಹಲವು ಸಿಕ್ಸರ್ ಹೊಡೆದಿದ್ದೇನೆ. ಆದರೆ ಕೊಹ್ಲಿಯ ಆ ಎರಡು ಸಿಕ್ಸರ್ಗಳು ತುಂಬಾ ತುಂಬಾ ವಿಶೇಷವಾದುದು. ಕೊಹ್ಲಿ ಹೊರತುಪಡಿಸಿ, ಬೇರೆ ಯಾರದೇ ಬ್ಯಾಟ್ನಿಂದ ಆ ರೀತಿಯ ಹೊಡೆತಗಳು ಬರುತ್ತಿರಲಿಲ್ಲ’ ಎಂದು ಬಿಸಿಸಿಐ ವೆಬ್ಸೈಟ್ಗೆ ಹಾರ್ದಿಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.