ಕಂಪಾಲಾ: 43 ವರ್ಷದ ಆಫ್ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ ಅವರು ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಉಗಾಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಆಡುವ ಅತ್ಯಂತ ಹಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಲಿದ್ದಾರೆ.

ಜೂನ್ 2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನ ಆತಿಥ್ಯದಲ್ಲಿ ನಡೆಯುವ ಟೂರ್ನಿಗೆ ಉಗಾಂಡ ಕ್ರಿಕೆಟ್ ಸಂಸ್ಥೆಯು ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಉಗಾಂಡ ಇದೇ ಮೊದಲ ಬಾರಿ ಮುಖ್ಯ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಬ್ರಿಯಾನ್ ಮಸಾಬಾ ತಂಡವನ್ನು ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್, ಅಫ್ಗಾನಿಸ್ಥಾನ, ಪಾಪುವಾ ನ್ಯೂಗಿನಿ ಮತ್ತು ಆತಿಥೇಯ ವೆಸ್ಟ್ ಇಂಡೀಸ್ ಅನ್ನು ಒಳಗೊಂಡಿರುವ ‘ಸಿ’ ಗುಂಪಿನಲ್ಲಿ ಉಂಗಾಡ ಸ್ಥಾನ ಪಡೆದಿದೆ. ಜೂನ್ 3ರಂದು ಅಫ್ಗನ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.