ಕೋಲ್ಕತ್ತ: ಪುದುಚೇರಿ ತಂಡದಲ್ಲಿ ಆಡುತ್ತಿರುವ ‘ದಾವಣಗೆರೆ ಎಕ್ಸ್‌ಪ್ರೆಸ್’ ಆರ್. ವಿನಯಕುಮಾರ್ ಅವರು ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಮಧ್ಯಮವೇಗದ ಬೌಲರ್ ಆದರು.

ಇಲ್ಲಿ ನಡೆದ ಮಿಜೋರಾಂ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 24ಕ್ಕೆ3 ವಿಕೆಟ್ ಗಳಿಸಿದ ಅವರು ಈ ಸಾಧನೆ ಮಾಡಿದರು. ರಣಜಿ ಕ್ರಿಕೆಟ್‌ನಲ್ಲಿ ಅವರು ಒಟ್ಟು 412 ವಿಕೆಟ್‌ಗಳನ್ನು ಗಳಿಸಿದರು. ಕನ್ನಡಿಗ ವಿನಯ್, ಹರಿಯಾಣದ ಮಾಜಿ ಆಟಗಾರ ಪಂಕಜ್ ಸಿಂಗ್ (409) ಅವರ ದಾಖಲೆಯನ್ನು ಮೀರಿ ನಿಂತರು.

ಈ ಪಂದ್ಯದಲ್ಲಿ ಪುದುಚೇರಿ ತಂಡವು ಇನಿಂಗ್ಸ್ ಮತ್ತು 272 ರನ್‌ಗಳಿಂದ ಗೆದ್ದ ಮೇಲೆ ಸಹ ಆಟಗಾರರು ವಿನಯ್ ಅವರಿಗೆ ಗೌರವ ರಕ್ಷೆ ನೀಡಿ ಅಭಿನಂದಿಸಿದರು. 2004ರಿಂದ ಹೋದ ಋತುವಿನವರೆಗೆ ಅವರು ಕರ್ನಾಟಕ ತಂಡದಲ್ಲಿ ಆಡುತ್ತಿದ್ದರು. ಅವರ ನಾಯಕತ್ವದಲ್ಲಿ ಕರ್ನಾಟಕ ತಂಡವು ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಿತ್ತು. ಈ ಋತುವಿನಿಂದ ಅವರು ಪುದುಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.