ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ನಲ್ಲಿ 9,000 ರನ್ಗಳ ಮೈಲಿಗಲ್ಲು ತಲುಪಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಕೊಹ್ಲಿ ಸ್ಮರಣೀಯ ಸಾಧನೆ ಮಾಡಿದರು.

ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದ ವಿರಾಟ್, ದ್ವಿತೀಯ ಇನಿಂಗ್ಸ್ನಲ್ಲಿ ಸಮಯೋಚಿತವಾಗಿ ಆಡುವ ಮೂಲಕ ಆಕರ್ಷಕ ಅರ್ಧಶತಕ ಗಳಿಸಿದರು.

ಸಚಿನ್, ದ್ರಾವಿಡ್, ಗವಾಸ್ಕರ್ ಸಾಲಿಗೆ ಕೂಹ್ಲಿ...

ಟೆಸ್ಟ್ ಕ್ರಿಕೆಟ್ನಲ್ಲಿ 9,000 ರನ್ಗಳ ಸಾಧನೆಯೊಂದಿಗೆ, ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸುನಿಲ್ ಗವಾಸ್ಕರ್ ಸಾಲಿಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ 9,000 ರನ್ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಸಚಿನ್ ತೆಂಡೂಲ್ಕರ್ 15,921, ರಾಹುಲ್ ದ್ರಾವಿಡ್ 13,265 ಹಾಗೂ ಸುನಿಲ್ ಗವಾಸ್ಕರ್ 10,122 ರನ್ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್ನ ಒಟ್ಟಾರೆ ಪಟ್ಟಿಯಲ್ಲಿ ಸಚಿನ್ ಮುಂಚೂಣಿಯಲ್ಲಿದ್ದಾರೆ.

ರನ್ ಬರ ನೀಗಿಸಿದ ವಿರಾಟ್...

35 ವರ್ಷದ ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನ ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ ಮೊದಲ ಅರ್ಧಶತಕ ಇದಾಗಿದೆ. ಆ ಆ ಮೂಲಕ ರನ್ ಬರವನ್ನು ನೀಗಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ 46 ಹಾಗೂ ಬಾಂಗ್ಲಾದೇಶ ವಿರುದ್ಧ 47 ರನ್ ಗಳಿಸಿದ್ದರೂ ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ.
.IND vs NZ: ಬೆಂಗಳೂರು ನೆಲದಲ್ಲಿ ಮಗದೊಂದು ಸ್ಮರಣೀಯ ಶತಕ ಗಳಿಸಿದ ರಚಿನ್.ರೋಹಿತ್, ಕೊಹ್ಲಿ, ಸರ್ಫರಾಜ್ ಫಿಫ್ಟಿ; ರೋಚಕ ಹಂತದಲ್ಲಿ ಬೆಂಗಳೂರು ಟೆಸ್ಟ್.IND vs NZ 1st Test: ಸೆಹ್ವಾಗ್ ಸಿಕ್ಸರ್ ದಾಖಲೆ ಮುರಿದ ಟಿಮ್ ಸೌಥಿ.IND vs NZ: ಕೊಹ್ಲಿ ಸೇರಿದಂತೆ ಸೊನ್ನೆ ಸುತ್ತಿದ ಐವರು ಬ್ಯಾಟರ್ಗಳು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.