ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ಟಿ–20 ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಹಸರಂಗಾ ರಾಜೀನಾಮೆ

Published 11 ಜುಲೈ 2024, 14:01 IST
Last Updated 11 ಜುಲೈ 2024, 14:01 IST
ಅಕ್ಷರ ಗಾತ್ರ

ಕೊಲಂಬೊ: ಭಾರತ ವಿರುದ್ಧ 3 ಪಂದ್ಯಗಳ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗೂ ಮುನ್ನ ಶ್ರೀಲಂಕಾ ಟಿ–20 ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಸ್ಪಿನ್ನರ್ ವನಿಂದು ಹಸರಂಗಾ ಕೆಳಗಿಳಿದಿದ್ದಾರೆ.

ಪಲೆಕಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜುಲೈ 26, 27 ಮತ್ತು 29ರಂದು ನಡೆಯಲಿರುವ ಮೂರು ಟಿ–20 ಪಂದ್ಯಗಳು ಮತ್ತು ಬಳಿಕ ನಡೆಯಲಿರುವ ಏಕದಿನ ಸರಣಿಗಾಗಿ ಭಾರತ ತಂಡ ಶ್ರೀಲಂಕಾಗೆ ಪ್ರವಾಸ ಕೈಗೊಳ್ಳಲಿದೆ.

‘ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟಿ–20 ನಾಯಕತ್ವಕ್ಕೆ ರಾಜೀನಾಮೆ ನೀಡಲು ವನಿಂದು ಹಸರಂಗಾ ನಿರ್ಧರಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲು ಬಯಸುತ್ತೇವೆ’ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

‘ಶ್ರೀಲಂಕಾ ಕ್ರಿಕೆಟ್‌ನ ಹಿತಾಸಕ್ತಿಗಾಗಿ ನಾಯಕನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದೇನೆ. ತಂಡದ ಆಟಗಾರನಾಗಿ ಮುಂದುವರಿಯುವುದಾಗಿ ಹಸರಂಗಾ ತಿಳಿಸಿದ್ದಾರೆ’ಎಂದು ಪ್ರಕಟಣೆ ತಿಳಿಸಿದೆ.

ಟಿ–20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಹಸರಂಗಾ, ತಂಡವನ್ನು ಸೂಪರ್–8ರ ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರು.

‘ಒಬ್ಬ ಆಟಗಾರನಾಗಿ ಶ್ರೀಲಂಕಾ ತಂಡಕ್ಕಾಗಿ ಸಂಪೂರ್ಣ ಶ್ರಮ ಹಾಕುತ್ತೇನೆ. ನಾನು ನನ್ನ ತಂಡ ಮತ್ತು ನಾಯಕರ ಜೊತೆ ಸದಾ ನಿಲ್ಲುತ್ತೇನೆ’ ಎಂದು ಹಸರಂಗಾ ತಿಳಿಸಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಹಸರಂಗಾ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹೇಳಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ಅಂತರರಾಷ್ಟ್ರೀಯ ಸರಣಿಗಳಲ್ಲಿ ಅವರೊಬ್ಬ ನಮ್ಮ ತಂಡದ ಅತ್ಯುತ್ತಮ ಆಟಗಾರರಾಗಿರುತ್ತಾರೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT