ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

Published : 9 ಜುಲೈ 2024, 13:14 IST
Last Updated : 9 ಜುಲೈ 2024, 13:14 IST
ಫಾಲೋ ಮಾಡಿ
Comments

ನವದೆಹಲಿ: ಟಿ–20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಸಂದೇಶವನ್ನು ನೀಡಿದ್ದಾರೆ.

ತಮ್ಮ ಕೌಶಲ್ಯಗಳನ್ನು ವೃದ್ಧಿಸಿದ್ದಕ್ಕಾಗಿ ಮತ್ತು ಸ್ಟಾರ್‌ಡಮ್‌ ಅನ್ನು ಡ್ರೆಸ್ಸಿಂಗ್ ರೂಮ್‌ನ ಹೊರಗೇ ಬಿಟ್ಟಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

3 ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಅವರ ಅಧಿಕಾರಾವಧಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ–20 ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಅಂತ್ಯಗೊಂಡಿತ್ತು.

‘ನನ್ನ ಪತ್ನಿ ರಿತಿಕಾ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾರೆ ಮತ್ತು ನಿಮ್ಮನ್ನು ನನ್ನ ಜೊತೆ ಆ ರೀತಿ ಕರೆಯುವುದು ನನ್ನ ಅದೃಷ್ಟವಾಗಿದೆ’ ಎಂದು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿ ಆಟಗಾರರು ಮತ್ತು ಕೋಚ್‌ ಸಮೀಕರಣ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ರೋಹಿತ್ ಮಾತು ಸೂಚಕವಾಗಿದೆ.

ಈ ಕುರಿತಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತ ಪದಗಳ ಹುಡುಕಾಟದಲ್ಲಿ ತೊಡಗಿದ್ದೇನೆ. ಅದಕ್ಕೆ ಸೂಕ್ತ ಪದ ಸಿಗಬಹುದೇ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ನೀವು ಈ ಕ್ರೀಡೆಯ ಮೇರು ವ್ಯಕ್ತಿತ್ವ. ನಿಮ್ಮ ಎಲ್ಲ ಸಾಧನೆಗಳನ್ನು ಬದಿಗಿಟ್ಟು ಕೋಚ್ ಆಗಿ ನಮ್ಮ ಹಂತಕ್ಕೆ ಇಳಿದು ನಮಗೆ ಮಾರ್ಗದರ್ಶನ ನೀಡಿದ್ದೀರಿ ಎಂದಷ್ಟೇ ಹೇಳಬಲ್ಲೆ. ಅದು ಈ ಆಟಕ್ಕೆ ನೀವು ನೀಡುವ ಕೊಡುಗೆ, ಗೌರವ ಮತ್ತು ಪ್ರೀತಿಯಾಗಿದೆ’ ಎಂದು ರೋಹಿತ್ ಬರೆದುಕೊಂಡಿದ್ದಾರೆ.

2007ರಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ನಾಯಕರಾಗಿದ್ದಾಗ ರೋಹಿತ್, ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲಿನ ಬಳಿಕ ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯದಂತೆ ರೋಹಿತ್ ತಡೆದಿದ್ದನ್ನು ರಾಹುಲ್ ಇತ್ತೀಚೆಗೆ ಹೇಳಿಕೊಂಡಿದ್ದರು.

‘ಕೋಟ್ಯಾನುಕೋಟಿ ಜನರ ರೀತಿಯೇ ನನ್ನ ಬಾಲ್ಯದ ದಿನಗಳಿಂದಲೂ ನಿಮ್ಮನ್ನು ನೋಡುತ್ತಿದ್ದೆ. ಇಷ್ಟು ಹತ್ತಿರದಿಂದ ನಿಮ್ಮ ಜೊತೆ ಕೆಲಸ ಮಾಡುವುದಕ್ಕೆ ನಾನು ಅದೃಷ್ಟ ಮಾಡಿದ್ದೆ. ನಿಮ್ಮಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ. ಆ ಒಂದೊಂದು ಕ್ಷಣವೂ ನೆನಪಿನಲ್ಲಿರುತ್ತದೆ’ಎಂದಿದ್ದಾರೆ.

ಅಲ್ಲದೆ, ರಾಹುಲ್ ಮಾರ್ಗದರ್ಶನದಲ್ಲಿ ಟ್ರೋಫಿ ಗೆದ್ದಿರುವುದಕ್ಕೆ ಸಂತಸವಿದೆ ಎಂದೂ ಅವರು ಹೇಳಿದ್ದಾರೆ.

‘ನಿಮ್ಮ ಸಾಧನೆಯಲ್ಲಿ ಇದೊಂದು ಕೊರತೆ ಕಾಡುತ್ತಿತ್ತು. ನಾವಿಬ್ಬರೂ ಒಟ್ಟಿಗೆ ಇದನ್ನು ಸಾಧಿಸಿದ್ದಕ್ಕೆ ಸಂತಸವಿದೆ. ರಾಹುಲ್ ಭಾಯ್ ನಿಮ್ಮನ್ನು ನನ್ನ ವಿಶ್ವಾಸಿ, ನನ್ನ ಕೋಚ್ ಮತ್ತು ನನ್ನ ಸ್ನೇಹಿತ ಎಂದು ಕರೆಯುವುದಕ್ಕೆ ನಾನು ಅತ್ಯಂತ ಸೌಭಾಗ್ಯಶಾಲಿ’ ಎಂದು ಬರೆದಿದ್ದಾರೆ.

ರಾಹುಲ್ ದ್ರಾವಿಡ್ ಸಹ ರೋಹಿತ್ ಅವರ ಉತ್ತಮ ಗುಣಗಳನ್ನು ಶ್ಲಾಘಿಸಿದ್ದರು. ಅವರು ಒಬ್ಬ ಆಟಗಾರನಿಂತ ಹೆಚ್ಚು. ಒಬ್ಬ ವ್ಯಕ್ತಿಯಾಗಿ ಅವರ ಜೊತೆ ಇದ್ದ ಬಾಂಧವ್ಯವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT