ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕ್ರಿಕೆಟ್ | ಲೂಸ್ ಶತಕ: ದಕ್ಷಿಣ ಆಫ್ರಿಕಾ ಹೋರಾಟ

ಸ್ನೇಹಾ ರಾಣಾಗೆ ಎಂಟು ವಿಕೆಟ್: ಮೊದಲ ಇನಿಂಗ್ಸ್‌ನಲ್ಲಿ ಭಾರತಕ್ಕೆ ಮುನ್ನಡೆ
Published 30 ಜೂನ್ 2024, 23:12 IST
Last Updated 30 ಜೂನ್ 2024, 23:12 IST
ಅಕ್ಷರ ಗಾತ್ರ

ಚೆನ್ನೈ: ಸ್ನೇಹಾ ರಾಣಾ ಅವರ ದಾಳಿಯ ಮುಂದೆ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ ಪುಟಿದೆದ್ದಿತು. 

ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನದಾಟದಲ್ಲಿ ಸುನೆ ಲೂಸ್ (109 ರನ್) ಶತಕ ಹಾಗೂ ನಾಯಕಿ ಲೌರಾ ವೊಲ್ವಾರ್ಟ್‌ (ಬ್ಯಾಟಿಂಗ್ 93; 252ಎ)  ಅವರ ದಿಟ್ಟ ಬ್ಯಾಟಿಂಗ್‌ನಿಂದ ತಂಡವು ಎರಡನೇ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 232 ರನ್ ಗಳಿಸಿತು. 

ಆದರೆ ಭಾರತ ತಂಡವುಮೊದಲ ಇನಿಂಗ್ಸ್‌ನಲ್ಲಿ ಪೇರಿಸಿರುವ 603 ರನ್‌ಗಳ ಬೃಹತ್ ಮೊತ್ತವನ್ನು ಚುಕ್ತಾ ಮಾಡಲು ಪ್ರವಾಸಿ ಬಳಗವು ಇನ್ನೂ 105 ರನ್‌ ಗಳಿಸಬೇಕಿದೆ. 

ಮೊದಲ ಇನಿಂಗ್ಸ್‌ನಲ್ಲಿ ಭಾರತದ ಸ್ನೇಹಾ ರಾಣಾ (77ಕ್ಕೆ8) ಅವರ ದಾಳಿಯ ಮುಂದೆ ದಕ್ಷಿಣ ಆಫ್ರಿಕಾ ತಂಡವು 84.3 ಓವರ್‌ಗಳಲ್ಲಿ 266 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಅದರೊಂದಿಗೆ 337 ರನ್‌ಗಳ ಹಿನ್ನಡೆ ಅನುಭವಿಸಿತು. 

ಭಾರತ ತಂಡವು ದಕ್ಷಿಣ ಆಫ್ರಿಕಾ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿಯೂ ಆರಂಭಿಕ ಆಘಾತ ಅನುಭವಿಸಿದ ಆಫ್ರಿಕಾ ತಂಡವು ನಂತರ ಚೇತರಿಸಿಕೊಂಡಿತು. ಲೌರಾ ಮತ್ತು ಲೂಸ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 190 ರನ್‌ ಸೇರಿಸಿದರು.  

ಇನಿಂಗ್ಸ್‌ನ 74ನೇ ಓವರ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಸುನೆ ಲೂಸ್ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಭಾರತ:115.1 ಓವರ್‌ಗಳಲ್ಲಿ 6ಕ್ಕೆ603.

ದಕ್ಷಿಣ ಆಫ್ರಿಕಾ: 84.3 ಓವರ್‌ಗಳಲ್ಲಿ 266 (ನಡೈನ್ ಡಿ ಕ್ಲರ್ಕ್ 39, ಸ್ನೇಹಾ ರಾಣಾ 77ಕ್ಕೆ8, ದೀಪ್ತಿ ಶರ್ಮಾ 47ಕ್ಕೆ2)

ಎರಡನೇ ಇನಿಂಗ್ಸ್

ದಕ್ಷಿಣ ಆಫ್ರಿಕಾ: 85 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 232 (ಲೌರಾ ವೊಲ್ವಾರ್ಟ್ ಬ್ಯಾಟಿಂಗ್ 93, ಸುನೆ ಲೂಸ್ 109) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT