ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Womens Asia Cup: ಹರ್ಮನ್‌ಪ್ರೀತ್, ರಿಚಾ ಅಬ್ಬರ; ಭಾರತಕ್ಕೆ ಭರ್ಜರಿ ಗೆಲುವು

ನಾಲ್ಕರ ಹಂತಕ್ಕೆ ಲಗ್ಗೆಯಿಟ್ಟ ಭಾರತ
Published : 21 ಜುಲೈ 2024, 10:26 IST
Last Updated : 21 ಜುಲೈ 2024, 10:26 IST
ಫಾಲೋ ಮಾಡಿ
Comments

ದಂಬುಲಾ: ಹಾಲಿ ಚಾಂಪಿಯನ್ ಭಾರತ ಮಹಿಳೆಯರ ಕ್ರಿಕೆಟ್ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ನಾಲ್ಕರ ಘಟ್ಟದ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. 

ಭಾನುವಾರ ಇಲ್ಲಿ ನಡೆದ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು 78 ರನ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ವಿರುದ್ಧ ಗೆದ್ದಿತು. 

ಟಾಸ್ ಗೆದ್ದ ಯುಎಇ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ನಾಯಕಿ ಹರ್ಮನ್ ಪ್ರೀತ್ ಕೌರ್ (66; 47ಎ, 4ಷ7, 6X1) ಮತ್ತು ರಿಚಾ ಘೋಷ್ (ಔಟಾಗದೆ 64; 29ಎ, 4X12, 6X1) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡವು  20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 201 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ಯುಎಇ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 123 ರನ್‌ ಗಳಿಸಿತು.  ತಂಡದ ಕವೀಶಾ ಎಗೊಡಗೆ (ಔಟಾಗದೆ 40; 32ಎ, 4X3, 6X1) ಅವರ ಆಲ್‌ರೌಂಡ್ ಆಟವು ಗಮನ ಸೆಳೆಯಿತು. 

ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ (23ಕ್ಕೆ2) ತಮ್ಮ ಉತ್ತಮ ಬೌಲಿಂಗ್‌ನಿಂದ ಯುಎಇ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಮಿಂಚಿದ್ದ ಆರಂಭಿಕ ಜೋಡಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರಿಂದ ದೊಡ್ಡ ಜೊತೆಯಾಟ ದಾಖಲಾಗಲಿಲ್ಲ. 3ನೇ ಓವರ್‌ನಲ್ಲಿ ಕವೀಶಾ ಎಸೆತದಲ್ಲಿ ಸ್ಮೃತಿ ಮಂದಾನ ಔಟಾದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 23 ರನ್‌ಗಳು ಗಳಿಕೆಯಾದವು. 

6ನೇ ಓವರ್‌ ಮುಗಿಯುವ ಮುನ್ನವೇ ಶಫಾಲಿ ವರ್ಮಾ ಮತ್ತು ಹೇಮಲತಾ ದಯಾಳನ್ ಕೂಡ ಪೆವಿಲಿಯನ್ ಸೇರಿದರು. ಆಗ ತಂಡದ ಮೊತ್ತವು (3ಕ್ಕೆ52) ಅರ್ಧಶತಕ ದಾಟಿತ್ತಷ್ಟೇ. ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ಕೌರ್ ಅವರು ಜೆಮಿಮಾ ರಾಡ್ರಿಗಸ್ (14; 13ಎ) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 54 ರನ್‌  ಸೇರಿಸಿದರು. ಇದರೊಂದಿಗೆ ತಂಡವು ಶತಕದ ಗಡಿ ದಾಟಿತು. 

ಮತ್ತೆ ಮಿಂಚಿದ ಕವೀಶಾ ಎಸೆತದಲ್ಲಿ ಜೆಮಿಮಾ ಔಟಾದರು. ಇದರೊಂದಿಗೆ ಜೊತೆಯಾಟ ಮುರಿಯಿತು. ಯುಎಇ ಆಟಗಾರ್ತಿಯರ ಸಂಭ್ರಮಿಸಿದರು. ಆದರೆ ಕ್ರೀಸ್‌ನಲ್ಲಿದ್ದ ಕೌರ್ ಅವರೊಂದಿಗೆ ರಿಚಾ ಘೋಷ್ ಜೊತೆಯಾತ ನಂತರ ಯುಎಗೆ ಸಂಭ್ರಮಿಸುವ ಅವಕಾಶ ಸಿಗಲಿಲ್ಲ. ಕೌರ್ ಮತ್ತು ರಿಚಾ (ಔಟಾಗದೆ 64; 29ಎ, 4X12, 6X1) ಐದನೇ ವಿಕೆಟ್ ಜೊತೆಯಾಟದಲ್ಲಿ 75 ರನ್ ಸೇರಿಸಿದರು. ಕೊನೆಯ ಓವರ್‌ನಲ್ಲಿ ಹರ್ಮನ್ ರನೌಟ್ ಆಗುವುದರೊಂದಿಗೆ ಈ ಜೊತೆಯಾಟ ಮುರಿದುಬಿತ್ತು. 

ಭಾರತ ತಂಡವು ಎ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಿಸಿದೆ. ಒಟ್ಟು 4 ಅಂಕ ಮತ್ತು +3.298 ನೆಟ್ ರನ್‌ರೇಟ್ ಗಳಿಸಿದೆ.  ತನ್ನ ಪಾಲಿನ ಇನ್ನೊಂದು ಮತ್ತು ಕೊನೆಯ ಪಂದ್ಯದಲ್ಲಿ ಭಾರತವು ನೇಪಾಳದ ವಿರುದ್ಧ ಮಂಗಳವಾರ ಆಡಲಿದೆ. 

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 5ಕ್ಕೆ 201 (ಶಫಾಲಿ ವರ್ಮಾ 37, ಹರ್ಮನ್‌ಪ್ರೀತ್ ಕೌರ್ 66, ರಿಚಾ ಘೋಷ್ ಔಟಾಗದೆ 64, ಕವೀಶಾ ಎಗೊಡಗೆ 36ಕ್ಕೆ2)

ಯುಎಇ: 20 ಓವರ್‌ಗಳಲ್ಲಿ 7ಕ್ಕೆ123 (ಇಶಾ ರೋಹಿತ್ ಒಝಾ 38, ಕವೀಶಾ ಎಗೊಡಗೆ ಔಟಾಗದೆ 40, ದೀಪ್ತಿ ಶರ್ಮಾ 23ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 78 ರನ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT