ಬೆಂಗಳೂರು: ಫೇಸ್‌ವಾಷ್ ಜಾಹೀರಾತೊಂದರ ತುಣುಕನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಾಕಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಮೊಡವೆ ಸಮಸ್ಯೆ ಬಗೆಹರಿಸಲು ನಾವಿಬ್ಬರೂ ಜೊತೆಯಾಗಿದ್ದೇವೆ ನೋಡಿ’ ಎಂಬರ್ಥದ ಸಂದೇಶವನ್ನು ಕೊಹ್ಲಿ ಬರೆದಿದ್ದಾರೆ. ಈ ವಿಡಿಯೊದಲ್ಲಿ ಜಾಹೀರಾತಿಗೆ ಸಂಬಂಧಿಸಿದ ಹಾಡು ಮತ್ತು ನೃತ್ಯದಲ್ಲಿ ಇಬ್ಬರೂ ಆಟಗಾರರು ಇದ್ದಾರೆ.

ಕೆಲವು ಹಿರಿಯ ಕ್ರಿಕೆಟಿಗರೂ ವಿರಾಟ್ ಮತ್ತು ಪಂತ್ ಅವರನ್ನು ಗೇಲಿ ಮಾಡಿದ್ದಾರೆ. ‘ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಅವರು ಈ ಜಾಹಿರಾತಿಗೆ ಸೂಕ್ತವಾಗಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ ಇದೆ’ ಎಂದು ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಟ್ವೀಟ್ ಮಾಡಿದ್ದಾರೆ.ಕೊಹ್ಲಿ ಮತ್ತು ಪಂತ್ ಅವರು ಗುರುವಾರ ಹಿಮಾಲಯ ಫೇಸ್‌ವಾಷ್ ಕ್ರೀಮ್ ಉತ್ಪನ್ನದ ಪ್ರಚಾರ ರಾಯಭಾರಿಗಳಾಗಿ ಒಪ್ಪಂದ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.