ವಿಯೆಟ್ ಟ್ರೈ ಸಿಟಿ: ಭಾರತ ತಂಡದವರು ಎಎಫ್ಸಿ 20 ವರ್ಷದೊಳಗಿನ ಮಹಿಳೆಯರ ಏಷ್ಯಾಕಪ್ ಎರಡನೇ ಸುತ್ತಿನ ಕ್ವಾಲಿಫೈಯರ್ಸ್ ಫುಟ್ಬಾಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶನಿವಾರ ಇಲ್ಲಿ ನಡೆದ ‘ಎಫ್’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ 1–1ರಿಂದ ಆತಿಥೇಯ ವಿಯೆಟ್ನಾಂ ತಂಡದೊಂದಿಗೆ ಡ್ರಾ ಸಾಧಿಸಿತು. ಇದರೊಂದಿಗೆ ಎರಡೂ ತಂಡಗಳು ಏಳು ಪಾಯಿಂಟ್ಸ್ ಗಳಿಸಿದರೂ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದಿದ್ದರಿಂದ ಭಾರತ ಟೂರ್ನಿಯಿಂದ ನಿರ್ಗಮಿಸಿತು.

ಈ ಪಂದ್ಯದಲ್ಲಿ ಭಾರತದ ಪರ ಭವಿನಾ ದೇವಿ (12ನೇ ನಿ.) ಮತ್ತು ವಿಯೆಟ್ನಾಂ ತಂಡಕ್ಕಾಗಿ ಟ್ರಾನ್ ನಹತ್ ಲಾನ್ (45+2ನೇ ನಿ.) ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.