ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫುಟ್‌ಬಾಲ್‌ ಟೂರ್ನಿ: ಸೆಮಿಗೆ ಅಗ್ನಿಪುತ್ರ, ಕೊಡಗು ಎಫ್‌ಸಿ

Published : 29 ಸೆಪ್ಟೆಂಬರ್ 2024, 14:27 IST
Last Updated : 29 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ಬೆಂಗಳೂರು: ಹಾಲಿ ಚಾಂಪಿಯನ್‌ ಎಫ್‌ಸಿ ಅಗ್ನಿಪುತ್ರ ಮತ್ತು ಕೊಡಗು ಎಫ್‌ಸಿ ತಂಡಗಳು ಇಲ್ಲಿ ನಡೆಯುತ್ತಿರುವ ಸಿ.ಪುಟ್ಟಯ್ಯ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಮುನ್ನಡೆದವು.

ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಕೊಡಗು (4 ಅಂಕ) ಮತ್ತು ಸಿ ಗುಂಪಿನಲ್ಲಿ ಅಗ್ರಸ್ಥಾನ ಹೊಂದಿರುವ ಅಗ್ನಿಪುತ್ರ (6 ಅಂಕ) ತಂಡಗಳು ಅ.4ರಂದು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.

ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಎಫ್‌ಸಿ ರಿಯಲ್‌ ಬೆಂಗಳೂರು ತಂಡವು 2–1ರಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ರಿಯಲ್‌ ತಂದ ಪರ ಸಾಹಿಲ್ ಸುರೇಶ ಲಮಾಣಿ (44ನೇ ನಿಮಿಷ), ಆರ್. ಕಾರ್ತಿಕೇಯನ್ (47ನೇ) ಗೋಲು ಗಳಿಸಿದರು. ರೆಬೆಲ್ಸ್‌ನ ದಿನೇಶ್‌ ಎಸ್‌ (75ನೇ) ಏಕೈಕ ಗೋಲು ದಾಖಲಿಸಿದರು.

ಸಿ ಗುಂಪಿನ ಪಂದ್ಯದಲ್ಲಿ ಅಗ್ನಿಪುತ್ರ ತಂಡವು 1–0ಯಿಂದ ಸೌತ್‌ ಯುನೈಟೆಡ್‌ ತಂಡವನ್ನು ಮಣಿಸಿತು. ಲಾಲ್ ರುವಾಟ್ಫೆಲಾ (49ನೇ) ಅವರು ಅಗ್ನಿಪುತ್ರ ಪರ ಗೆಲುವಿನ ಗೋಲು ಹೊಡೆದರು.

ಇಂದಿನ ಪಂದ್ಯಗಳು

ರೂಟ್ಸ್‌ ಎಫ್‌ಸಿ– ಎಎಸ್‌ಸಿ ಅಂಡ್‌ ಸೆಂಟರ್ ಎಫ್‌ಸಿ (ಮಧ್ಯಾಹ್ನ 1)

ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ– ಕಿಕ್‌ಸ್ಟಾರ್ಟ್‌ ಎಫ್‌ಸಿ (ಸಂಜೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT