ಸೇಂಟ್ ಪೀಟರ್ಸ್‍ಬರ್ಗ್, ರಷ್ಯಾ: ವಿಶ್ವಕಪ್ ಫುಟ್‍ಬಾಲ್ ಪಂದ್ಯದ ಕೊನೆ ನಿಮಿಷದಲ್ಲಿ ಎರಡು ಗೋಲು ಬಾರಿಸುವ ಮೂಲಕ ಬ್ರೆಜಿಲ್ ತಂಡ ಕೋಸ್ಟರಿಕಾ ತಂಡವನ್ನು ಪರಾಭವಗೊಳಿಸಿ ಗೆಲುವಿನ ನಗೆ ಬೀರಿದೆ.

90+1ನೇ ನಿಮಿಷದಲ್ಲಿ ಫಿಲಿಪ್ಪಿ ಕುಟಿನೊ ಮತ್ತು 90+7ನೇ ನಿಮಿಷದಲ್ಲಿನೇಮರ್ ಹೊಡೆದೆ ಗೋಲುಗಳಿಂದ ಬ್ರೆಜಿಲ್ ಗೆಲುವು ಸಾಧಿಸಿದೆ.

ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ಜತೆ ಪಂದ್ಯ ಡ್ರಾ ಮಾಡಿಕೊಂಡಿದ್ದ ಬ್ರೆಜಿಲ್ ಈ ಗೆಲುವಿನ ಮೂಲಕ ಇ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿದೆ. ಮೊದಲ ಪಂದ್ಯದಲ್ಲಿ ನಿಧಾನಗತಿಯ ಆಟ ಪ್ರದರ್ಶಿಸಿದ್ದ ಬ್ರೆಜಿಲ್ ತಂಡದಲ್ಲಿ ನೇಮರ್ ಆಟ ನಿರಾಶಾದಾಯಕವಾಗಿತ್ತು. ಈ ಗೆಲುವಿನ ಮೂಲಕ ಬ್ರೆಜಿಲ್ ಪ್ರೀಕ್ವಾರ್ಟರ್ ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.
ಸತತವಾಗಿ ಎರಡು ಪಂದ್ಯಗಳನ್ನು ಸೋತ ಕೋಸ್ಟರಿಕಾ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.