ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅನ್ನು ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಅಮಾನತುಗೊಳಿಸಿರುವುದನ್ನು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದೆ. ಈ ವಿಷಯದ ಬಗ್ಗೆ ಬುಧವಾರವೇ ವಿಚಾರಣೆ ನಡೆಸುವಂತೆ ಕೋರಿದೆ.

ಇದನ್ನೂ ಓದಿ:ಅನ್ಯರ ಪ್ರಭಾವ: ಭಾರತೀಯ ಫುಟ್‌ಬಾಲ್ ಫೆಡರೇಶನ್ ಅನ್ನು ಅಮಾನತುಗೊಳಿಸಿದ ಫಿಫಾ

ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು.

ಎಐಎಫ್‌ಎಫ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ ಎಂದು ಮೆಹ್ತಾ ಸುಪ್ರೀಂಕೋರ್ಟ್‌ಗೆ ತಿಳಿಸಿದರು. ಬುಧವಾರ ವಿಷಯದ ಕುರಿತು ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದರು.

ಬುಧವಾರ ಈ ವಿಷಯವನ್ನು ವಿಚಾರಣೆಗೆ ಮೊದಲ ಪ್ರಕರಣವಾಗಿ ಪಟ್ಟಿ ಮಾಡಲಾಗಿದೆ ಎಂದು ಪೀಠವು ಮೆಹ್ತಾಗೆ ತಿಳಿಸಿತು. ಎಐಎಫ್‌ಎಫ್‌ನ ಅಮಾನತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ದಾಖಲೆಗಳನ್ನು ಮೆಹ್ತಾ ಕೋರ್ಟ್‌ಗೆ ಸಲ್ಲಿಸಲಿಲ್ಲ. ಆದರೆ, ಅಮಾನತಿನ ಬಗ್ಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿರುವ ಫಿಫಾದ ಪತ್ರಿಕಾ ಪ್ರಕಟಣೆಯನ್ನು ಕೋರ್ಟ್‌ಗೆ ಸಲ್ಲಿಸಿದರು.

ಫುಟ್‌ಬಾಲ್‌ನ ಉನ್ನತ ಸಂಸ್ಥೆಯಾದ ಫಿಫಾ, ಅನ್ಯರ ಪ್ರಭಾವದ ಕಾರಣ ಮುಂದಿಟ್ಟು ಎಐಎಫ್‌ಎಫ್ ಅನ್ನು ಮಂಗಳವಾರ ಅಮಾನತುಗೊಳಿಸಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಭಾರತದಲ್ಲೇ ನಡೆಯಬೇಕಿದ್ದ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿ ಆತಿಥ್ಯ ದೇಶದ ಕೈತಪ್ಪಿತ್ತು. ಅಮಾನತು ತೆರವಾಗುವವರೆಗೆ ಭಾರತ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ.

ಇವುಗಳನ್ನು ಓದಿ

ಫಿಫಾ ಅಧ್ಯಕ್ಷರ ಮೇಲೆ ಮೊಕದ್ದಮೆ

ಮೋದಿಯವರಿಗೆ ಉಡುಗೊರೆ ಸಿಕ್ಕಿದ ಜೆರ್ಸಿ ಸಂಖ್ಯೆ 420: ಇದು ಫೋಟೊಶಾಪ್ ಕರಾಮತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.