ಬ್ಯಾಂಬೊಲಿಮ್, ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್ಸಿ ತಂಡವು ಭಾನುವಾರ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.

ಸಾಬಾ ಲಾಜ್ಲೊ ತರಬೇತಿಯಲ್ಲಿ ಪಳಗಿರುವ ಚೆನ್ನೈಯಿನ್ ಎಫ್ಸಿ (ಸಿಎಫ್ಸಿ) ತನ್ನ ಮೊದಲ ಪಂದ್ಯದಲ್ಲಿ ಜಮ್ಶೆಡ್ಪುರ ಎಫ್ಸಿಯನ್ನು ಮಣಿಸಿತ್ತು. ಆ ಪಂದ್ಯದಲ್ಲಿ ಅನಿರುದ್ಧ ಥಾಪಾ ಹಾಗೂ ಇಸ್ಮಾ ಕಾಲ್ಚಳಕ ತೋರಿದ್ದರು.

ಮೊದಲ ಜಯದ ಹುಡುಕಾಟದಲ್ಲಿರುವ ಕೇರಳ ಬ್ಲಾಸ್ಟರ್ಸ್, ಚೆನ್ನೈಗೆ ಸವಾಲೆಸೆಯಲು ಸಜ್ಜಾಗಿದೆ.

ಮೊದಲ ಪಂದ್ಯದಲ್ಲಿ ಸಿಎಫ್ಸಿ ಆಕ್ರಮಣಕಾರಿ ಆಟವಾಡಿತ್ತು. ಮಿಡ್ಫೀಲ್ಡ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಅದೇ ತಂತ್ರವನ್ನು ಈ ಪಂದ್ಯದಲ್ಲೂ ಅಳವಡಿಸುವ ಉದ್ದೇಶವನ್ನು ತಂಡ ಹೊಂದಿದೆ

ಜಯದ ಖಾತೆ ತೆರೆಯುವ ತವಕದಲ್ಲಿರುವ ಕೇರಳ ಬ್ಲಾಸ್ಟರ್ಸ್ ತಂಡವನ್ನು ಹಗುರವಾಗಿ ಪರಿಗಣಿಸದಿರಲು ಲಾಜ್ಲೊ ನಿರ್ಧರಿಸಿದ್ದಾರೆ.

ಕೇರಳ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ನಾರ್ತ್ಈಸ್ಟ್ ಯುನೈಟೆಡ್ನೊಂದಿಗೆ ಡ್ರಾ (2–2) ಸಾಧಿಸಿತ್ತು. ಆ ಹಣಾಹಣಿಯಲ್ಲಿ 2–0 ಮುನ್ನಡೆಯಲ್ಲಿದ್ದರೂ ಬಳಿಕ ಎದುರಾಳಿಗೆ ಗೋಲು ಬಿಟ್ಟುಕೊಟ್ಟು ಮರುಗಿತ್ತು.

ಲಲ್ಲಿಯಾಂಜುವಾಲಾ ಚಾಂಗ್ಲೆ ಮೇಲೆ ಚೆನ್ನೈ ಕೋಚ್ ಲಾಜ್ಲೊ ಭರವಸೆ ಇಟ್ಟುಕೊಂಡಿದ್ದಾರೆ. ಹೋದ ಪಂದ್ಯದಲ್ಲಿ ಹಲವು ಅವಕಾಶಗಳನ್ನು ಸೃಷ್ಟಿಸಿದ್ದ ಅವರು ಗೋಲುಗಳನ್ನಾಗಿ ಪರಿವರ್ತಿಸಲು ವಿಫಲರಾಗಿದ್ದರು.

ನಾರ್ತ್ ಈಸ್ಟ್ ಎದುರಿನ ಪಂದ್ಯದಲ್ಲಿ ಮೊದಲ ಗೋಲು ದಾಖಲಿಸಿದ್ದ ಸೆರ್ಜಿಯೊ ಸಿಡೊಂಚಾ ಹಾಗೂ ಗ್ಯಾರಿ ಹೂಪರ್ ಅವರು ಕೇರಳ ತಂಡದ ಪ್ರಮುಖ ಆಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.