ಬೆಂಗಳೂರು: ಫುಟ್ಬಾಲ್ ಲೋಕದ ತಾರೆಕ್ರಿಸ್ಟಿಯಾನೊ ರೊನಾಲ್ಡೊ ಅವರು ಇತ್ತೀಚೆಗಷ್ಟೇ ಬರೋಬ್ಬರಿ 14 ವರ್ಷದ ಬಳಿಕ ಇಂಗ್ಲೆಂಡ್ನ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸೇರಿದ್ದಾರೆ. ಇದರ ಬೆನ್ನಲ್ಲೆ ಕ್ಲಬ್ ರೊನಾಲ್ಡೊ ಅವರ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು ಅಭಿಮಾನಿಗಳಿಗೆ ರೋಮಾಂಚನ ನೀಡಿದೆ.

2018 ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ತೊರೆದಿದ್ದ ರೊನಾಲ್ಡೊ, ಇಟಲಿಯ ಯುವೆಂಟಿಸ್ ಫುಟ್ಬಾಲ್ ಕ್ಲಬ್ ಸೇರಿದ್ದರು. ಅಲ್ಲಿಯ ಒಪ್ಪಂದ ಮುಗಿದ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ರೊನಾಲ್ಡೊ ಅವರನ್ನು ಸುಮಾರು 398 ಕೋಟಿ ರೂಪಾಯಿ ನೀಡಿ ಬುಟ್ಟಿಗೆ ಹಾಕಿಕೊಂಡಿದೆ.

ಈಗ ಬಿಡುಗಡೆ ಮಾಡಿರುವ ರೊನಾಲ್ಡೊ ಅವರ ಜೆರ್ಸಿ ಅತ್ಯಾಕರ್ಷಕವಾಗಿದ್ದು, ಅಡಿದಾಸ್ ಬ್ರ್ಯಾಂಡ್ನಲ್ಲಿ ಅವರು ಕಂಗೊಳಿಸಿದ್ದಾರೆ. ಅವರು ಮುಂದಿನ 2022 ರವರೆಗೆ ಒಪ್ಪಂದದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡಲಿದ್ದಾರೆ.

2003–07 ರವರೆಗೆ ಮೊದಲ ಬಾರಿಗೆ ರೊನಾಲ್ಡೊಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ನಲ್ಲಿ ಆಡಿದ್ದರು. ಆಗ ಅವರು ಕ್ಲಬ್ಗೆ ಯುರೋಪ್ ಪ್ರೀಮಿಯರ್ ಲಿಗ್ ಕಪ್ ಗೆಲ್ಲಿಸಿ ಕೊಟ್ಟಿದ್ದರು. ಅಲ್ಲದೇ 194 ಪಂದ್ಯಗಳನ್ನು ಆಡಿ 84 ಗೋಲ್ ಗಳಿಸಿದ್ದರು.

ಇದನ್ನೂ ಓದಿ:ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡವನ್ನು ತೊರೆದ ಲಯೊನೆಲ್ ಮೆಸ್ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.