ಮಾಸ್ಕೊ: ಮೆಸ್ಸಿ, ರೊನಾಲ್ಡೊ ಆಟದ ಶೈಲಿಯನ್ನು ವರ್ಣಿಸುವಾಗ 'ಅನ್ಯಗ್ರಹದಿಂದ ಬಂದವನು' ಎಂಬ ಉಪಮೆ ಬಳಸಲಾಗುತ್ತದೆ. ಆದರೆ ಈ ರೀತಿಯ ಯಾವುದೇ ಉಪಮೆಗಳಿಲ್ಲದಕ್ರೊವೇಷ್ಯಾದ ನಾಯಕ ಲೂಕಾ ಮ್ಯಾಡ್ರಿಚ್ ವಿಶ್ವಕಪ್ ಪಂದ್ಯದಲ್ಲಿ ಚಿನ್ನದ ಚೆಂಡು ಗೆದ್ದು ಹೀರೊ ಆಗಿದ್ದಾರೆ.ಕ್ರೊವೇಷ್ಯಾ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸುತ್ತದೆ ಎಂದು ಯಾರೂ ಊಹಿಸದೇ ಇದ್ದಾಗ, ಆ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದ ನಾಯಕ ಲೂಕಾ.

ಕ್ರೊವೇಷ್ಯಾದ ಪಶ್ಚಿಮ ಭಾಗದಲ್ಲಿ ಅಡ್ರಿಯಾಟಿಕ್ ಸಮುದ್ರ ತೀರದಲ್ಲಿರುವ ಝದರ್ ಎಂಬ ಪಟ್ಟಣದಲ್ಲಿ ಲೂಕಾ ಮಾಡ್ರಿಚ್ ಎಂಬ ಹೆಸರಿನ ಇಬ್ಬರು ವ್ಯಕ್ತಿಗಳಿದ್ದರು.ವರ್ಷಗಳ ಹಿಂದೆ ಸೆರ್ಬಿಯನ್ ಬಂಡಾಯಗಾರರಿಂದ ಹತ್ಯೆಗೀಡಾದ ಲೂಕಾ ಮ್ಯಾಡ್ರಿಚ್ ಅವರ ಮೊಮ್ಮಗನೇ ಈ ಲೂಕಾ ಮ್ಯಾಡ್ರಿಚ್.

ಝದರ್ ಪಟ್ಟಣದಿಂದ ಬಂದ ಸಪೂರ ಕಾಯದ ಈ ಹುಡುಗ ಚೆನ್ನಾಗಿ ಆಟವಾಡುತ್ತಿದ್ದರೂ, ಕ್ರೊವೇಷ್ಯಾದ ಶ್ರೇಷ್ಠ ಕ್ಲಬ್ಗಳಲ್ಲೊಂದಾದ ಹಾಜ್ದುಕ್ ಸ್ಪ್ಲಿಟ್ನಲ್ಲಿಸ್ಥಾನ ಸಿಗಲಿಲ್ಲ. ನಂತರ ಡೈನಮೊ ಸಾಗ್ರೈಬ್ ಕ್ಲಬ್ ಮೂಲಕ ತಂಡಮ್ಯಾಡ್ರಿಚ್, ಟೊಟನ್ಹಂ ಹಾಟ್ಸ್ಪುರ್ ತಂಡ ಸೇರಿದರು.

2012ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಸೇರ್ಪಡೆಯಾದಾಗ ಅಲ್ಲಿ ಮ್ಯಾಡ್ರಿಚ್ ಯುಗ ಆರಂಭವಾಯಿತು. ಸ್ಪಾನಿಷ್ ಕ್ಲಬ್ ಜತೆ ಮೂರು ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗಳಿಸುವ ಮೂಲಕ ಮ್ಯಾಡ್ರಿಚ್ 'ಮ್ಯಾಚಿಕ್' ಮಿಡ್ ಫೀಲ್ಡರ್ ಆಗಿ ಹೊರಹೊಮ್ಮಿದರು.

ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಶ್ರೇಷ್ಠ ಕ್ರೀಡಾಪಟುವಿಗಾಗಿ ನೀಡುವ ಚಿನ್ನದ ಚೆಂಡು ಪ್ರಶಸ್ತಿ ಪಡೆದ ಕ್ರೊವೇಷ್ಯಾ ನಾಯಕ ಲೂಕಾ ಮಾಡ್ರಿಚ್ಗೆ ಇದೊಂದು ಸಂತೋಷ ಕ್ಷಣ ಆಗಿರಲಿಲ್ಲ.ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತ ನೋವು ಅವರಲ್ಲಿತ್ತು. ಚಿನ್ನದ ಚೆಂಡು ಪ್ರಶಸ್ತಿ ಪಡೆದ ನಂತರ ಪ್ರತಿಕ್ರಿಯಿಸಿದ ಲೂಕಾ ಈ ಪ್ರಶಸ್ತಿ ಲಭಿಸಿದ್ದು ಖುಷಿ ಕೊಟ್ಟಿದೆ. ಪ್ರಶಸ್ತಿಗಾಗಿ ನನ್ನನ್ನು ಆಯ್ಕೆ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಆದರೆ ವಿಶ್ವಕಪ್ ಗೆಲ್ಲಬೇಕೆಂಬುದು ನನ್ನ ಆಸೆಯಾಗಿತ್ತು.ನಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆಯಿದೆ. ಫೈನಲ್ನಲ್ಲಿ ಪರಾಭವಗೊಂಡಿರುವ ದುಃಖವೂ ಇದೆ.ನಾವು ಇದಕ್ಕಿಂತ ಹೆಚ್ಚಿನದ್ದನ್ನು ಬಯಸಿದ್ದೆವು. ಆದರೆ ಯಾವುದನ್ನೂ ಬದಲಿಸಲು ಸಾಧ್ಯವಿಲ್ಲ ಅಲ್ಲವೇ? ಕೊನೆಯ ಕ್ಷಣವರೆಗೆ ನಾವು ಹೋರಾಡಿದ್ದೆವು ಎಂದಿದ್ದಾರೆ.

ಲೂಕಾ ಮ್ಯಾಡ್ರಿಚ್ ಅವರ ಕ್ರೊವೇಷ್ಯಾ ತಂಡ ವಿಶ್ವಕಪ್ ಗೆಲ್ಲಲಿಲ್ಲ, ಆದರೆ ಟೂರ್ನಿಯಲ್ಲಿ ಕಪ್ಪುಕುದುರೆಯಾಗಿ ಕಣಕ್ಕಿಳಿದು ಜನರ ಮನಸ್ಸು ಗೆಲ್ಲುವಲ್ಲಿ ಈ ತಂಡ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.