ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Euro Cup | ಇಂಗ್ಲೆಂಡ್‌ ವಿರುದ್ಧ ‘ಡ್ರಾ’ ಮಾಡಿದ ಸ್ಲೊವೇನಿಯಾ

ಯುರೊ 24: ಮ್ಯಾನೇಜರ್ ಕಡೆ ಬಿಯರ್ ಕಪ್ ಎಸೆದು ಆಕ್ರೋಶ
Published 26 ಜೂನ್ 2024, 16:20 IST
Last Updated 26 ಜೂನ್ 2024, 16:20 IST
ಅಕ್ಷರ ಗಾತ್ರ

ಕೊಲೊನ್ (ಜರ್ಮನಿ), (ಎಎಫ್‌ಪಿ): ಇಂಗ್ಲೆಂಡ್ ತಂಡ ಬುಧವಾರ ನಡೆದ ಯುರೊ 2024 ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ ಗೋಲಿಲ್ಲದೇ ‘ಡ್ರಾ’ ಮಾಡಿಕೊಳ್ಳುವುದಕ್ಕೇ ಸಮಾಧಾನಪಡಬೇಕಾಯಿತು. ಈ ನಿರಾಶಾದಾಯಕ ಆಟದ ನಡುವೆಯೂ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದೊಡನೆ ನಾಕೌಟ್‌ ತಲುಪಿತು.

ಸ್ಲೊವೇನಿಯಾ ಕೂಡ 16ರ ಸುತ್ತಿಗೆ ಮುನ್ನಡೆಯಿತು. ಆದರೆ ಹಾರಿ ಕೇನ್‌ ನೇತೃತ್ವದ ಇಂಗ್ಲೆಂಡ್ ತಂಡ ತೋರಿದ ಆಟದಿಂದ ನಿರಾಶರಾದ ಅಭಿಮಾನಿಗಳು ಆಟಗಾರರ ವಿರುದ್ಧ ಕೂಗೆಬ್ಬಿಸಿದರಲ್ಲದೇ, ತಂಡದ ಮ್ಯಾನೇಜರ್‌ ಗರೆತ್‌ ಸೌತ್‌ಗೇಟ್‌ ಅವರತ್ತ ಬಿಯರ್ ಕಪ್‌ಗಳನ್ನು ಎಸೆದರು.

ತಾರಾವರ್ಚಸ್ಸಿನ ಫಾರ್ವಡ್‌ ಆಟಗಾರರಿದ್ದ ಇಂಗ್ಲೆಂಡ್‌ ದಾಳಿಯನ್ನು ಸ್ಲೊವೇನಿಯಾ ಯಶಸ್ವಿಯಾಗಿ ಮೆಟ್ಟಿನಿಂತಿತು. ತನ್ಮೂಲಕ ಸ್ಲೊವೇನಿಯಾ 9 ಪಂದ್ಯಗಳಿಂದ ಅಜೇಯವಾಗಿ ಉಳಿಯಿತು.

ಗೋಲಿಲ್ಲದೇ ‘ಡ್ರಾ’:

ಮ್ಯೂನಿಚ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸರ್ಬಿಯಾ ತಂಡ ಶತಪ್ರಯತ್ನ ನಡೆಸಿದರೂ, ಡೆನ್ಮಾರ್ಕ್ ವಿರುದ್ಧದ ಅದರ ಪಂದ್ಯ 0–0 ಡ್ರಾ ಆಯಿತು. ಸರ್ಬಿಯಾ ‘ಡ್ರಾ’ದಿಂದಾಗಿ ಟೂರ್ನಿಯಿಂದ ಹೊರಬಿತ್ತು.

ಇಂಗ್ಲೆಂಡ್ ವಿರುದ್ಧ 0–1 ಸೋಲು ಕಂಡಿದ್ದ ಸರ್ಬಿಯಾ ಇನ್ನೆರಡು ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡು ‘ಸಿ’ ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಸರಿಯಿತು. ‘ಗೋಲು ಗಳಿಸಲು ನಮ್ಮಿಂದಾದಷ್ಟು ಪ್ರಯತ್ನ ನಡೆಸಿದೆವು. ಆದರೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ನಾವು ಹಾಕಿದ ಶ್ರಮ ಸಾಲಲಿಲ್ಲ’ ಎಂದು ಮುನ್ಪಡೆ ಆಟಗಾರ ಅಲೆಕ್ಸಾಂಡರ್ ಮಿತ್ರೊವಿಕ್ ಹತಾಶೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT