ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದು ಸುದ್ದಿಯಲ್ಲಿರುವ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕ್ಲಬ್ ಸರಣಿಯ 2 ಪಂದ್ಯಗಳಿಂದ ನಿಷೇಧಿಸಲಾಗಿದೆ. ಹಿಂದಿನ ಇಪಿಎಲ್ ವೇಳೆ ಎವರ್ಟನ್ ವಿರುದ್ಧದ ಪಂದ್ಯದ ಸೋಲಿನ ಬಳಿಕ ಅಭಿಮಾನಿಯೊಬ್ಬರ ಮೊಬೈಲ್ ಫೋನ್ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ ಇಂಗ್ಲೆಂಡ್ ಫುಟ್ಬಾಲ್ ಒಕ್ಕೂಟ ಈ ಶಿಕ್ಷೆ ವಿಧಿಸಿದೆ.

ಏಪ್ರಿಲ್ನಲ್ಲಿ ನಡೆದ ಪಂದ್ಯದಲ್ಲಿ ಯುನೈಟೆಡ್ 1–0 ಗೋಲುಗಳಿಂದ ಸೋಲು ಅನುಭವಿಸಿತ್ತು. ಬಳಿಕ ರೊನಾಲ್ಡೊ ಯುವ ಅಭಿಮಾನಿಯೊಬ್ಬರ ಕೈಯಿಂದ ಮೊಬೈಲ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ ವಿಡಿಯೊ ತುಣುಕನ್ನು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ಪೋರ್ಚುಗಲ್ ಪರ ಫಿಫಾ ವಿಶ್ವಕಪ್ ಅಂಗಳಕ್ಕಿಳಿಯಲಿದ್ದಾರೆ. ಪೋರ್ಚುಗಲ್, ಘಾನಾ ವಿರುದ್ಧ ಸೆಣಸಲಿದೆ. ರೊನಾಲ್ಡೊ ಅವರು ‘ಮ್ಯಾಂಚೆಸ್ಟರ್ ಯುನೈಟೆಡ್’ ಕ್ಲಬ್ ತೊರೆದಿದ್ದಾರೆ. ಪ್ರೀಮಿಯರ್ ಲೀಗ್ನ ಕ್ಲಬ್ ಮಂಗಳವಾರ ಈ ವಿಷಯ ತಿಳಿಸಿತ್ತು. ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಅದರ ಮ್ಯಾನೇಜರ್ ಎರಿಕ್ ಟೆನ್ ಹಾಗ್ ವಿರುದ್ಧ ಕೂಡ ರೊನಾಲ್ಡೊ ಇತ್ತೀಚೆಗೆ ಹರಿಹಾಯ್ದಿದ್ದರು.

‘ಮ್ಯಾಂಚೆಸ್ಟರ್ ಕ್ಲಬ್ ನನ್ನನ್ನು ಬಲವಂತದಿಂದ ಹೊರಹಾಕಲು ಪ್ರಯತ್ನಿಸುತ್ತಿದೆ’ ಎಂದು ಬ್ರಿಟನ್ನ ‘ಟಾಕ್ ಟಿ.ವಿ’ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.