ಕಲಬುರಗಿ: ಫಿಫಾ ಮಾನ್ಯತೆಯ ಸಿಂಥೆಟಿಕ್ ಟರ್ಫ್ ಫುಟ್ಬಾಲ್ ಅಂಗಣ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ತಲೆಯೆತ್ತಿದೆ. ಈಗಾಗಲೇ ರಾಜ್ಯದಲ್ಲಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಇಂತಹ ಅಂಗಣಗಳಿದ್ದು, ಇದು ರಾಜ್ಯದ 3ನೇ ಅಂಗಣವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್ಡಿಬಿ)ಯು, ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ 2020–21ನೇ ಸಾಲಿನಲ್ಲಿ ₹3 ಕೋಟಿ ಅನುದಾವನ್ನು ಮೀಸಲಿರಿಸಿತ್ತು. ಲೋಕೋಪಯೋಗಿ ಇಲಾಖೆಯು ಕಾಮಗಾರಿಯನ್ನು ನಿರ್ವಹಿಸಿತ್ತು. ಸದ್ಯ ಅಂಗಣದ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.

ಪೆವಿಲಿಯನ್, ಗ್ಯಾಲರಿ, ಫ್ಲಡ್ಲೈಟ್ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಬಾಕಿಯಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ.

ವಿಶೇಷತೆಗಳೇನು?: ಫುಟ್ಬಾಲ್ ಅಂಗಣವನ್ನು ಫಿಫಾ ಮಾನದಂಡಗಳ ಪ್ರಕಾರ ನಿರ್ಮಿಸಲಾಗಿದೆ. ಆರಂಭದಲ್ಲಿ ಕಂಕರ್, ವೆಟ್ಮಿಕ್ಸ್, ಎಂ–ಸ್ಯಾಂಡ್ಗಳನ್ನು ಬಳಸಿ ಭದ್ರ ಬುನಾದಿ ಹಾಕಲಾಗಿದೆ. ಬಳಿಕ ರಬ್ಬರ್ ಹಾಸು, ಸಿಂಥೆಟಿಕ್ ಟರ್ಫ್ (ಕೃತಕ ಹುಲ್ಲಿನ ಹಾಸು) ಅಳವಡಿಸಲಾಗಿದ್ದು, ನಂತರದಲ್ಲಿ ಸಿಲಿಕಾ ಸ್ಯಾಂಡ್ ಹಾಗೂ ಎಸ್ಬಿಆರ್ (ಸ್ಟೈರೀನ್ ಬ್ಯೂಟಾಡಿನ್ ರಬ್ಬರ್) ಅನ್ನು ಬಳಸಿ, ಬ್ರಷಿಂಗ್ ಮಾಡಲಾಗಿದೆ. ಇದು ಆಟಗಾರರಿಗೆ ಗಾಯಗಳಾಗದಂತೆ ತಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.