ಮ್ಯಾಡ್ರಿಚ್: ಕ್ರೊವೇಷ್ಯಾ ತಂಡ ಈ ಬಾರಿಯ ಫುಟ್ಬಾಲ್ ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಲು ಕಾರಣರಾದ ಲೂಕಾ ಮಾಡ್ರಿಕ್ 2018ನೇ ಸಾಲಿನ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೊನೆಲ್ ಮೆಸ್ಸಿ ಅವರ ದಶಕದ ಪಾರಮ್ಯಕ್ಕೆ ಮಾಡ್ರಿಕ್ ಅಂತ್ಯ ಹಾಡಿದ್ದಾರೆ. ಕ್ರೊವೇಷಿಯಾ ಮತ್ತು ರಿಯಲ್ ಮ್ಯಾಡ್ರಿಡ್ ತಂಡಗಳ ಮಿಡ್ಫೀಲ್ಡ್ ವಿಭಾಗದ ಪ್ರಮುಖ ಆಟಗಾರ ಆಗಿದ್ದಾರೆ ಮಾಡ್ರಿಕ್.

ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕ ನೀಡುವ ಈ ಪ್ರಶಸ್ತಿಯನ್ನು ಸೋಮ ವಾರ ಪ್ರದಾನ ಮಾಡಲಾಗಿದೆ. ಜಗತ್ತಿನ ವಿವಿಧ ಕಡೆಗಳ ಕ್ರೀಡಾ ಪತ್ರಕರ್ತರು ಮತ್ತು ಕೋಚ್ಗಳು ಮತದಾನ ಮಾಡುವ ಮೂಲಕ 30 ಫುಟ್ಬಾಲ್ ಆಟಗಾರರ ಪಟ್ಟಿಯಿಂದ ಲೂಕಾ ಅವರನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ 753 ಪಾಯಿಂಟ್ಗಳು ಲಭಿಸಿದ್ದು, ಎರಡನೇ ಸ್ಥಾನದಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ 476 ಪಾಯಿಂಟ್ ಮತ್ತು ಮೂರನೇ ಸ್ಥಾನದಲ್ಲಿರುವ ಆ್ಯಂಟೋಯ್ನ್ ಗ್ರೀಸ್ಮ್ಯಾನ್ 414 ಪಾಯಿಂಟ್ ಗಳಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸ್ ಆಟಗಾರ ಕಿಲಿಯನ್ ಬಾಪೆ ಇದ್ದು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಐದನೇ ಸ್ಥಾನದಲ್ಲಿದ್ದಾರೆ. ಬಾಪೆ ಉತ್ತಮ ಯುವ ಆಟಗಾರ ಎಂಬ ನೆಲೆಯಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಡಾಗೆ ಪ್ರಶಸ್ತಿ: ಮಹಿಳೆಯರ ವಿಭಾಗದಲ್ಲಿ ನಾರ್ವೆಯ ಆಡಾ ಹೆಗರ್ಬರ್ಗ್ ಪ್ರಶಸ್ತಿ ಗಳಿಸಿದರು. ಚಾಂಪಿಯನ್ಸ್ ಲೀಗ್ನಲ್ಲಿ ಅಮೋಘ ಆಟವಾಡಿದ ಅವರು ಫ್ರಾನ್ಸ್ನ ಲಿಯಾನ್ ಕ್ಲಬ್ಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.