ನವದೆಹಲಿ: ಭಾರತ ತಂಡದ ಮಾಜಿ ಡಿಫೆಂಡರ್ ಲಂಗಮ್ ಚಾವೊಬಾ ದೇವಿ ಅವರನ್ನು ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಆಗಲು ಸಜ್ಜಾಗಿದ್ದಾರೆ.

ಐ.ಎಂ. ವಿಜಯನ್ ನೇತೃತ್ವದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ತಾಂತ್ರಿಕ ಸಮಿತಿಯು ಬುಧವಾರ 51 ವರ್ಷದ ಚಾವೋಬಾ ದೇವಿ ಅವರ ಹೆಸರನ್ನು ಶಿಫಾರಸು ಮಾಡಿದೆ.

1999ರಲ್ಲಿ ಫಿಲಿಪೀನ್ಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಅವರು ಈ ಹಿಂದೆ ಭಾರತ ತಂಡದ ಸಹಾಯಕ ಕೋಚ್ ಆಗಿದ್ದರು.

‘ವಿಸ್ತೃತವಾದ ಚರ್ಚೆಗಳ ನಂತರ ತಾಂತ್ರಿಕ ಸಮಿತಿಯು ಲಂಗಮ್ ಚೋಬಾ ದೇವಿ ಅವರನ್ನು ಕೋಚ್ ಸ್ಥಾನಕ್ಕೆ ಶಿಫಾರಸು ಮಾಡಿದೆ. ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ತನ್ನ ಮುಂದಿನ ಸಭೆಯಲ್ಲಿ ಅದನ್ನು ಅನುಮೋದಿಸಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ತಾಂತ್ರಿಕ ಸಮಿತಿಯು ಪ್ರಿಯಾ ಪಿ.ವಿ. ಮತ್ತು ರೋನಿಬಾಲಾ ಚಾನು ಅವರನ್ನು ಕ್ರಮವಾಗಿ ತಂಡಕ್ಕೆ ಸಹಾಯಕ ಮತ್ತು ಗೋಲ್‌ಕೀಪಿಂಗ್ ಕೋಚ್ ಆಗಿ ಶಿಫಾರಸು ಮಾಡಿದೆ. ಈ ಮೂವರೂ ಫೆಬ್ರುವರಿಯಲ್ಲಿ ನಡೆದ ಟರ್ಕಿಷ್ ಮಹಿಳಾ ಕಪ್ ಟೂರ್ನಿಯಲ್ಲಿ ತಂಡದ ಜತೆಗಿದ್ದರು.

19 ವರ್ಷದೊಳಗಿನವರ ಮತ್ತು 16 ವರ್ಷದೊಳಗಿನವರ ಪುರುಷರ ತಂಡಗಳಿಗೆ ತರಬೇತುದಾರರ ನೇಮಕದ ಕುರಿತೂ ಸಮಿತಿಯು ಚರ್ಚಿಸಿತು. ಆ ತಂಡಗಳ ಮುಖ್ಯ ಕೋಚ್ ಸ್ಥಾನಗಳಿಗೆ ಕ್ರಮವಾಗಿ ರಂಜನ್ ಚೌಧರಿ ಮತ್ತು ಇಷ್ಫಾಕ್ ಅಹಮದ್ ಅವರನ್ನು ಶಿಫಾರಸು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.