ಬೆಂಗಳೂರು: ಸರವಣಕುಮಾರ್ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡವು ಬಿಡಿಎಫ್ಎ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 1–0ರಿಂದ ರಿಯಲ್ ಬೆಂಗಳೂರು ತಂಡವನ್ನು ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸರವಣಕುಮಾರ್ 65ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಕಿಕ್ಸ್ಟಾರ್ಟ್ ಎಫ್ಸಿ ತಂಡವು 2–1 ಗೋಲುಗಳಿಂದ ಕೊಡಗು ಎಫ್ಸಿ ತಂಡವನ್ನು ಸೋಲಿಸಿತು. ಕಿಕ್ಸ್ಟಾರ್ಟ್ನ ಸಾಯಿಖೋಮ್ ಬೋರಿಶ್ ಸಿಂಗ್ (48ನೇ ನಿ), ಅಭಿಷೇಕ್ ಶಂಕರ್ ಪವಾರ್ (77ನೇ) ತಲಾ ಒಂದು ಗೋಲು ಗಳಿಸಿದರು. ಕೊಡಗು ಪರ ಲಾಲ್ ಕ್ರಾಸ್ಮಾವಿಯಾ (70ನೇ) ಏಕೈಕ ಗೋಲು ತಂದಿತ್ತರು.

ನಾಳಿನ ಪಂದ್ಯಗಳು

ಬಿಯುಎಫ್ಸಿ- ಬೆಂಗಳೂರು ಯುನೈಟೆಡ್ (ಮಧ್ಯಾಹ್ನ 12.45)

ರಿಯಲ್ ಚಿಕ್ಕಮಗಳೂರು– ರೂಟ್ಸ್ ಎಫ್ಸಿ (ಮಧ್ಯಾಹ್ನ 3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.