‘ನೀವು ಮನುಷ್ಯರು ಎಲ್ಲಿ ಹೋದ್ರೂ ಗಲೀಜು ಮಾಡತೀರಿ, ಎಲ್ಲಾ ಕಡೆ ನಿಮ್ಮ ಕಸ ಬಿಟ್ಟು ಬರತೀರಿ’ ಎಂದು ಬೆಕ್ಕಣ್ಣ ಬೆಳಗ್ಗೆಯೇ ಮನುಷ್ಯಕುಲಕ್ಕೆ ಮಂಗಳಾರತಿ ಶುರು ಮಾಡಿತ್ತು.

‘ನೋಡಿಲ್ಲಿ... ಭೂಮಿ ಮ್ಯಾಗೆ ಎಲ್ಲಾ ಕಡೆ ಕಸದ ಬೆಟ್ಟ ಹಾಕಿದ್ದು ಸಾಲದು ಅಂತ ಅಲ್ಲಿ ಚಂದ್ರನ ಮ್ಯಾಗೂ ದೊಡ್ಡ ತೊಂಬತ್ತಾರು ಚೀಲಗಳಷ್ಟಾಗುವ ನಿಮ್ಮ ಕಸವನ್ನು ಬಿಟ್ಟು ಬಂದೀರಂತೆ’ ಎಂದು ಬೆಕ್ಕಣ್ಣ ಸುದ್ದಿ ತೋರಿಸಿ, ನನ್ನ ಮೂತಿಗೆ ತಿವಿಯಿತು. ನಾನು ಉತ್ತರಿಸಲಾಗದೇ ತ್ತೆತ್ತೆಬ್ಬೆಬ್ಬೆ ಎಂದು ತೊದಲಿದೆ.

ಆಮೇಲೆ ಘನಗಂಭೀರವಾಗಿ ಕುಳಿತು ಲ್ಯಾಪ್ಟಾಪ್ ತೆರೆದು ಅಧ್ಯಯನ ಮಾಡತೊಡಗಿತು. ಮಧ್ಯಾಹ್ನ ಊಟಕ್ಕೂ ಮೇಲೇಳಲಿಲ್ಲ. ಕುತೂಹಲ ತಡೆಯದೇ ಕೇಳಿದೆ.

‘ಮುಂದಿನ ಚಂದ್ರಯಾನದಾಗೆ ಕಸ ಅಲ್ಲೇ ಬಿಸಾಕಿ ಬರೂ ಹಂಗಿಲ್ಲ. ಚಂದ್ರನ ಮೇಲೆ ಗಗನಯಾತ್ರಿಗಳ ಕಸವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡೋ ತಂತ್ರಜ್ಞಾನ ಕಂಡುಹಿಡಿದವ್ರಿಗೆ 25 ಕೋಟಿ ರೂಪಾಯಿ ಬಹುಮಾನ ಕೊಡ್ತೀವಿ ಅಂತ ನಾಸಾದವ್ರು ಹೇಳ್ಯಾರೆ. ಲ್ಯೂನಾ ರೀಸೈಕಲ್ ಚಾಲೆಂಜಿನಾಗೆ ಭಾಗವಹಿಸಿ, ಚಂದ್ರನ ಮ್ಯಾಗೆ ಕಸ ನಿರ್ವಹಣೆ ತಂತ್ರಜ್ಞಾನ ಕಂಡುಹಿಡಿದು, ಬಹುಮಾನ ಗೆಲ್ತೀನಿ’ ಬೆಕ್ಕಣ್ಣ ಬಲೇ ಹುರುಪಿನಿಂದ ವಿವರಿಸಿತು.

‘ನಮ್ಮ ದೇಶದಾಗೆ ಪ್ರತಿದಿನ ಸರಾಸರಿ 1.80 ಲಕ್ಷ ಟನ್ ಕಸ ಬಿಸಾಕತೀವಿ. ಅದ್ರಾಗೆ ಸುಮಾರು ಅರ್ಧದಷ್ಟನ್ನು ರೀಸೈಕಲ್ ಮಾಡತೀವಿ, ಇನ್ನು ಅರ್ಧದಷ್ಟನ್ನು ಹಂಗೇ ಹಾಕಿ, ಕಸದ ಪರ್ವತ ಮಾಡತೀವಿ. ಚಂದ್ರನ ಮ್ಯಾಲೆ ಕಸದ ವಿಲೇವಾರಿ ಬಿಡಲೇ, ಮೊದಲು ನಮ್ಮ ದೇಶದ ಕಸದ ನಿರ್ವಹಣೆಗೆ ಒಳ್ಳೆ ತಂತ್ರಜ್ಞಾನ ಕಂಡುಹಿಡಿ’ ಎಂದೆ.

‘ನಮ್ಮ ದೇಶದಾಗೆ ಕಸ ತೆಗೆಯಕ್ಕೆ ಪೌರ ಕಾರ್ಮಿಕರು, ಕಸ ತಗಳ್ಳಕೆ ಬರೋ ಮಂದಿ ಅದಾರೆ. ಇನ್ನು ಕಸದ ನಿರ್ವಹಣೆ ಮಾಡಿ, ರೊಕ್ಕ ಗಳಿಸಾಕೆ ಗುತ್ತಿಗೆದಾರರು, ರಾಜಕಾರಣಿಗಳು, ಮುನ್ಸಿಪಾಲ್ಟಿ ಅಧಿಕಾರಿಗಳು ಹಿಂಗೆ ದೊಡ್ಡ ಗ್ಯಾಂಗೇ ಐತಿ. ಬ್ರಹ್ಮನೇ ತಂತ್ರಜ್ಞಾನ ಕಂಡು ಹಿಡಿದ್ರೂ ಇದು ಸುಧಾರಿಸಂಗಿಲ್ಲ’ ಎಂದು ಬೆಕ್ಕಣ್ಣ ಮೂತಿ ಮುರಿಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.