ತಾಷ್ಕೆಂಟ್: ಭಾರತ 16 ವರ್ಷದೊಳಗಿನವರ ಫುಟ್‌ಬಾಲ್ ತಂಡ ಬುಧವಾರ ಎಎಫ್‌ಸಿ–2020 ಚಾಂಪಿಯನ್‌ಷಿಪ್‌ನ ಅರ್ಹತಾ ಪಂದ್ಯದಲ್ಲಿ ತುರ್ಕಮೆನಿಸ್ತಾನದ ಸವಾಲು ಎದುರಿಸಲಿದೆ.

ತುರ್ಕಮೆನಿಸ್ತಾನ, ಬಹ್ರೇನ್ ಹಾಗೂ ಆತಿಥೇಯ ಉಜ್ಬೇಕಿಸ್ತಾನ ತಂಡಗಳಿರುವ ‘ಬಿ’ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದೆ.

‘ಎಎಫ್‌ಸಿ ಅರ್ಹತಾ ಟೂರ್ನಿಯಲ್ಲಿ ತೀವ್ರ ಸ್ಪರ್ಧೆ ಇರುವ ಗುಂಪಿನಲ್ಲಿ ’ಬಿ’ ಗುಂಪು ಒಂದು. ಸ್ಪರ್ಧೆಗೆ ಕಠಿಣ ತಯಾರಿ ನಡೆಸಿದ್ದೇವೆ. ನಿರೀಕ್ಷಿಸಿದಂತೆ ಫಲಿತಾಂಶ ಪಡೆಯಲು ಯಾವ ತಂಡಕ್ಕೂ ಸಾಧ್ಯವಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಮುನ್ನಡೆಯಲು ಸಾಧ್ಯ’ ಎಂದು ಭಾರತ ತಂಡದ ಕೋಚ್ ಬಿಬಿಯಾನೊ ಫರ್ನಾಂಡಿಸ್ ಹೇಳಿದ್ದಾರೆ.

‘ತುರ್ಕಮೆನಿಸ್ತಾನ ಬಲಿಷ್ಠ ಎದುರಾಳಿ. ಆದರೆ ನಾವು ನಮ್ಮದೇ ಆದ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅವುಗಳನ್ನು ಸೂಕ್ತವಾಗಿ ಕ್ರಿಯಾರೂಪಕ್ಕೆ ತಂದರೆ ತಂಡ ಗೆಲ್ಲುವ ಸಾಧ್ಯತೆಯಿದೆ’ ಎಂದು ಫರ್ನಾಂಡಿಸ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.