ನವದೆಹಲಿ: ಏಷ್ಯನ್ ಫುಟ್ಬಾಲ್ ಫೆಡರೇಷನ್, 2022ರ ಮಹಿಳಾ ಏಷ್ಯಾ ಕಪ್ ಆತಿಥ್ಯವನ್ನು ಭಾರತಕ್ಕೆ ವಹಿಸಿದೆ. 1979ರ ನಂತರ ಮೊದಲ ಬಾರಿ ಭಾರತಕ್ಕೆ ಈ ಟೂರ್ನಿಯ ಆತಿಥ್ಯ ಒದಗಿದೆ.

ಎಎಫ್ಸಿ ಮಹಿಳಾ ಫುಟ್ಬಾಲ್ ಸಮಿತಿ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆತಿಥ್ಯದ ಹಕ್ಕು ಪಡೆಯುವಂತೆ ಸಮಿತಿಯು, ಕಳೆದ ಫೆಬ್ರುವರಿಯಲ್ಲಿಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ (ಎಐಎಫ್ಎಫ್) ಶಿಫಾರಸು ಮಾಡಿತ್ತು.

ಈ ನಿರ್ಧಾರವನ್ನು ಎಎಫ್ಸಿ ಮಹಾ ಕಾರ್ಯದರ್ಶಿ ಡಾಟೊ ವಿಂಡ್ಸರ್ ಜಾನ್ ಪ್ರಕಟಿಸಿದರು.

1979ರಲ್ಲಿ ಈ ಚಾಂಪಿಯನ್ಷಿಪ್ ತವರಿನಲ್ಲಿ ನಡೆದಾಗ ಭಾರತ ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು. ಮುಂದಿನ ಆವೃತ್ತಿಯ ಟೂರ್ನಿಯಲ್ಲಿ, ಎಂಟು ತಂಡಗಳ ಬದಲು 12 ತಂಡಗಳು ಪಾಲ್ಗೊಳ್ಳಲಿವೆ. ಆತಿಥ್ಯ ವಹಿಸುತ್ತಿರುವ ಕಾರಣ ಭಾರತ ನೇರವಾಗಿ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿದೆ.

ಈ ಚಾಂಪಿಯನ್ಷಿಪ್ 2023ರ ಫಿಫಾ ಮಹಿಳಾ ವಿಶ್ವಕಪ್ಗೆ ಅಂತಿಮ ಅರ್ಹತಾ ಟೂರ್ನಿಯಾಗಿಯೂ ಪರಿಗಣನೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.