ನವದೆಹಲಿ: ಭಾರತ ಫುಟ್‌ಬಾಲ್ ತಂಡವು ಫಿಫಾ ಪುರುಷರ ರ‍್ಯಾಂಕಿಂಗ್‌ನಲ್ಲಿ 99ನೇ ಸ್ಥಾನಕ್ಕೇರಿದೆ. ಐದು ವರ್ಷಗಳ ನಂತರ 100ರೊಳಗೆ ಸ್ಥಾನಕ್ಕೇರಿದೆ.

ಸುನಿಲ್ ಚೆಟ್ರಿ ನಾಯಕತ್ವದ ಭಾರತ ತಂಡವು ಇತ್ತೀಚೆಗೆ ಸ್ಯಾಫ್ ಕಪ್ ಜಯಿಸಿತ್ತು. ಆ ಟೂರ್ನಿಯಲ್ಲಿ ಬಲಿಷ್ಠ ಲೆಬನಾನ್ ಮತ್ತು ಕುವೈತ್ ತಂಡಗಳನ್ನು ಸೋಲಿಸಿತ್ತು. ಫೈನಲ್‌ನಲ್ಲಿ ಶೂಟ್‌ಔಟ್‌ನಲ್ಲಿ ಗೆದ್ದು ಪ್ರಶಸ್ತಿ ಗಳಿಸಿತ್ತು. ಒಟ್ಟು 1208.69 ಅಂಕಗಳು ಭಾರತದ ಖಾತೆಯಲ್ಲಿವೆ. 2017 ಮತ್ತು 2018ರಲ್ಲಿ ಭಾರತ ತಂಡವು 96ನೇ ಸ್ಥಾನಕ್ಕೇರಿದೆ. 1996ರಲ್ಲಿ ಭಾರತವು 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಲೆಬನಾನ್ ತಂಡವು 100ನೇ ಸ್ಥಾನಕ್ಕೇರಿದೆ. ಎರಡು ಸ್ಥಾನಗಳ ಬಡ್ತಿ ಗಳಿಸಿದೆ. ಕುವೈತ್ ತಂಡವೂ ನಾಲ್ಕು ಸ್ಥಾನಗಳ ಬಡ್ತಿ ಪಡೆದು 137ಕ್ಕೇರಿದೆ.

ಪಶ್ಚಿಮ ಏಷ್ಯಾದ ದೇಶಗಳಾದ ಲೆಬನಾನ್ ಮತ್ತು ಕುವೈತ್ ದೇಶಗಳನ್ನು ಸ್ಯಾಫ್ ಚಾಂಪಿಯನ್‌ಷಿಪ್‌ಗೆ ಆಹ್ವಾನಿಸಲಾಗಿತ್ತು. ಟೂರ್ನಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಈ ಆಹ್ವಾನ ನೀಡಲಾಗಿತ್ತು.

ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್, ಬ್ರೆಜಿಲ್, ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳಿವೆ.

ಏಷ್ಯಾದ ಜಪಾನ್ (20), ಇರಾನ್ (22), ಆಸ್ಟ್ರೇಲಿಯಾ (27), ಕೊರಿಯಾ (28) ಮತ್ತು ಸೌದಿ ಅರೇಬಿಯಾ (54) ತಂಡಗಳು ಉತ್ತಮ ಸಾಧನೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.