ಮುಂಬೈ: ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಮತ್ತೆ ಮುಗ್ಗರಿಸಿತು.

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಸಿಟಿ ತಂಡವು 4–0ಯಿಂದ ಬೆಂಗಳೂರು ತಂಡವನ್ನು ಸೋಲಿಸಿತು.

ಸುನಿಲ್ ಚೆಟ್ರಿ ಬಳಗವು ಪಂದ್ಯದಲ್ಲಿ ಒಂದೂ ಗೋಲು ಗಳಿಸಲಿಲ್ಲ. ಮುಂಬೈ ತಂಡಕ್ಕೆ ತಡೆಯೊಡ್ಡುವಲ್ಲಿಯೂ ರಕ್ಷಣಾ ವಿಭಾಗ ವಿಫಲವಾಯಿತು.

14ನೇ ನಿಮಿಷದಲ್ಲಿ ಜಾರ್ಗೆ ಪೆರೆರಾ ದಿಯಾಝ್ ಮೊದಲ ಗೋಲು ಹೊಡೆದರು. ಲೆಲೆಂಗ್‌ಮಾವ್ಲಾ ರಾಲ್ಟೆ (32ನಿ), ಬಿಪಿನ್ ಸಿಂಗ್ ತೊನೊಂಜಾಮ್ (58ನಿ) ಹಾಗೂ ಲಲಿಯಂಜುವಾಲಾ ಚಾಂಗ್ಟಾ (74ನಿ) ಗೋಲು ಗಳಿಸಿದರು.

ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ಇದು ನಾಲ್ಕನೇ ಸೋಲು. ಒಟ್ಟು ಆರು ಪಂದ್ಯಗಳನ್ನು ಆಡಿದೆ. ಒಂದು ಗೆದ್ದು, ಇನ್ನೊಂದರಲ್ಲಿ ಡ್ರಾ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.