ಬೆಂಗಳೂರು: ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ಆಸೆ ತವರಿನಂಗಳದಲ್ಲಿಯೂ ಕೈಗೂಡಲಿಲ್ಲ.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿಎಫ್‌ಸಿ ಮತ್ತು ಪಂಜಾಬ್ ಎಫ್‌ಸಿ ನಡುವಣ ಪಂದ್ಯವು 3–3ರಿಂದ ಡ್ರಾ ಆಯಿತು.

ಈ ಟೂರ್ನಿಯಲ್ಲಿ ಬಿಎಫ್‌ಸಿ ತಂಡವು ಒಟ್ಟು ಎಂಟು ಪಂದ್ಯಗಳನ್ನು ಆಡಿದೆ. ಅದರಲ್ಲಿ ಒಂದು ಜಯ ಸಾಧಿಸದೆ. ನಾಲ್ಕು ಡ್ರಾ ಆಗಿದ್ದು, ಮೂರರಲ್ಲಿ ಸೋತಿದೆ.

ಪಂಜಾಬ್ ಎದುರಿನ ಪಂದ್ಯದಲ್ಲಿ ಸಮಬಲದ ಪೈಪೋಟಿ ನಡೆಯಿತು. ಬಿಎಫ್‌ಸಿಯ ಹರ್ಷ ಪತ್ರೆ (21ನೇ ನಿ), ಕರ್ಟೀಸ್ ಮೇನ್ (45+1) ಮತ್ತು ಜವಿ ಹರ್ನಾಂಡೇಜ್ (67ನೇ ನಿ) ಗೋಲು ಗಳಿಸಿದರು.

ಇದಕ್ಕುತ್ತರವಾಗಿ ಪಂಜಾಬ್ ತಂಡದ ನಿಕಿಲ್ ಪ್ರಭು (19ನೇ ನಿ), ದಿಮಿಟ್ರಿಸ್ ಚಾಟ್ಜಿಸಲಾಸ್ (26ನೇ ನಿ) ಮತ್ತು ಲೂಕಾ ಮೆಜೆಸಿನ್ (30ನೇ ನಿ) ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.