ಬ್ಯಾಂಬೊಲಿಮ್: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್ಸಿ ಹಾಗೂ ಒಡಿಶಾ ಎಫ್ಸಿ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾ ನಲ್ಲಿ ಅಂತ್ಯವಾಯಿತು.

ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಕೆಲವು ಅವಕಾಶಗಳನ್ನು ಉಭಯ ತಂಡಗಳು ಕೈಚೆಲ್ಲಿದವು. ಎರಡನೇ ನಿಮಿಷದಲ್ಲಿಯೇ ಚೆನ್ನೈಯಿನ್ ತಂಡದ ರಹೀಂ ಅಲಿ ನಡೆಸಿದ ಪ್ರಯತ್ನವನ್ನು ಒಡಿಶಾ ಗೋಲ್ಕೀಪರ್ ಅರ್ಷದೀಪ್ ಸಿಂಗ್ ವಿಫಲಗೊಳಿಸಿದರು.

42ನೇ ನಿಮಿಷದಲ್ಲಿ ಒಡಿಶಾ ತಂಡದ ಡಿಯೆಗೊ ಮೌರಿಸಿಯೊ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರೂ ಅದು ಆಫ್ಸೈಡ್ ಆಗಿತ್ತು. ಮೊದಲಾರ್ಧದ ಕೊನೆಯ ಹಂತದಲ್ಲಿ ಚೆನ್ನೈನ ಜಾಕಬ್ ಸಿಲ್ವಸ್ಟರ್ ನಡೆಸಿದ ಯತ್ನವನ್ನು ಅರ್ಷದೀಪ್ ಉತ್ತಮವಾಗಿ ತಡೆದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಕೆಗಾಗಿ ಭಾರಿ ಪ್ರಯತ್ನ ನಡೆಸಿದರೂ ಯಶಸ್ಸು ಸಿಗಲಿಲ್ಲ. ಪಂದ್ಯದ ಅಂತ್ಯಕ್ಕೆ ಪಾಯಿಂಟ್ಸ್ ಪಟ್ಟಿಯಲ್ಲಿ ಚೆನ್ನೈಯಿನ್ ಎಂಟನೇ ಸ್ಥಾನದಲ್ಲಿದ್ದರೆ, ಒಡಿಶಾ ಎಫ್ಸಿ 10ನೇ ಸ್ಥಾನದಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.