ಮುಂಬೈ: ಮೊಡೊ ಸೊಗೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮುಂಬೈ ಸಿಟಿ ಎಫ್ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ಎಫ್ಸಿ ಎದುರು 2–1ರಿಂದ ಗೆದ್ದಿತು.

ಈ ಜಯದೊಂದಿಗೆ ಮುಂಬೈ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಭಾನುವಾರ ಇಲ್ಲಿಯ ಮುಂಬೈ ಫುಟ್ಬಾಲ್ ಅರೆನಾದಲ್ಲಿ ಸೊಗೊ ಮೋಡಿ ಮಾಡಿದರು.

ಡಿಯಾಗೊ ಕಾರ್ಲೊಸ್ ನೀಡಿದ ನೆರವಿನಲ್ಲಿ ಆರನೇ ನಿಮಿಷ ಹಾಗೂ ವಿದ್ಯಾನಂದ ಅವರ ಸಹಾಯದಿಂದ 78ನೇ ನಿಮಿಷಗಳಲ್ಲಿ ಗೋಲು ಬಾರಿಸಿದ ಅವರು ಮುಂಬೈ ತಂಡದ ಸಂಭ್ರಮಕ್ಕೆ ಕಾರಣರಾದರು.

ಹೈದರಾಬಾದ್ ತಂಡದ ಪರ ಬೊಬೊ 81ನೇ ನಿಮಿಷದಲ್ಲಿ ಯಶಸ್ಸು ಕಂಡರು. ಆಶಿಶ್ ರಾಯ್ ಅವರ ನೆರವಿನೊಂದಿಗೆ ಗೋಲು ಗಳಿಸಿದರು.

ಜನವರಿ 3ರಂದು ಬೆಂಗಳೂರಿನಲ್ಲಿ ಪಂದ್ಯ: ಐಎಸ್ಎಲ್ ಟೂರ್ನಿಯ ಆಟಗಾರರಿಗೆ ಇನ್ನು ನಾಲ್ಕು ದಿನ ವಿರಾಮ. ವರ್ಷಾಂತ್ಯದ ಎರಡು ದಿನ ಮತ್ತು ಹೊಸ ವರ್ಷದ ಮೊದಲ ಎರಡು ದಿನ ಪಂದ್ಯಗಳಿಲ್ಲ. 2020ರ ಜನವರಿ ಮೂರರಂದು ಬೆಂಗಳೂರು ಎಫ್ಸಿಯ ಪಂದ್ಯ ನಡೆಯಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರನ್ನು ಎಫ್ಸಿ ಗೋವಾ ಎದುರಿಸಲಿದೆ.

10 ಪಂದ್ಯಗಳಿಂದ 21 ಪಾಯಿಂಟ್ಗಳನ್ನು ಕಲೆ ಹಾಕಿರುವ ಗೋವಾ ಈಗ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಬೆಂಗಳೂರು ಎಫ್ಸಿ 10 ಪಂದ್ಯಗಳಿಂದ 16 ಪಾಯಿಂಟ್ ಗಳಿಸಿ ಮೂರನೇ ಸ್ತಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಎಟಿಕೆಯ ಬಳಿ 18 ಪಾಯಿಂಟ್ಗಳಿವೆ. ಜನವರಿ ಮೂರರಂದು ಗೆದ್ದರೆ ಬೆಂಗಳೂರು ತಂಡ ಎರಡನೇ ಸ್ಥಾನಕ್ಕೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.