ಬೆಂಗಳೂರು: ಲಾಕ್ಡೌನ್ನಿಂದಾಗಿ ಹೊರಗೆ ಹೋಗಲಾಗದೆ ಔಷಧಿ ಒಳಗೊಂಡಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ನೆರವಾಗಲು ನಗರದ ಫುಟ್ಬಾಲ್ ಆಟಗಾರರು, ಕೋಚ್ಗಳು ಮತ್ತು ರೆಫರಿಗಳು ಮುಂದಾಗಿದ್ದಾರೆ.

ರಾಜ್ಯ ಫುಟ್ಬಾಲ್ ಸಂಸ್ಥೆ ಹಮ್ಮಿಕೊಂಡಿರುವ ಯೋಜನೆಯಡಿ ಹೊರಗೆ ಹೋಗಲು ಸಾಧ್ಯವಾಗದೇ ಇರುವ ಇತರ ಸಾರ್ವಜನಿಕರಿಗೂ ನೆರವಿನ ಹಸ್ತ ಚಾಚಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದ್ದಾರೆ.

‘ಕೊರೊನಾ ಹರಡುವುದನ್ನು ತಡೆಗಟ್ಟಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದನ್ನು ಗಮನದಲ್ಲಿರಿಸಿಕೊಂಡೇ ಸೇವೆ ನೀಡಲಾಗುವುದು. ಜನರು ಮನೆಯ ಒಳಗೇ ಸುರಕ್ಷಿತವಾಗಿ ಇರಬೇಕೆಂಬುದು ಸಂಸ್ಥೆಯ ಆಶಯ’ ಎಂದು ಅವರು ತಿಳಿಸಿದ್ದಾರೆ. ಮಾಹಿತಿಗೆ 7022527775 ಅಥವಾ 9844262442 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.