ಪ್ಯಾರಿಸ್: ತಾರಾ ಆಟಗಾರ ಲಯೊನೆಲ್ ಮೆಸ್ಸಿ ಗಳಿಸಿದ ಗೋಲಿನ ನೆರವಿನಿಂದ ಪ್ಯಾರಿಸ್ ಸೇಂಟ್ ಜರ್ಮನ್ ತಂಡವು ದಾಖಲೆಯ 11ನೇ ಬಾರಿ ಲೀಗ್ 1 ಫ್ರೆಂಚ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಶನಿವಾರ ಸ್ಟ್ರಾಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) 1–1 ಗೋಲಿನಿಂದ ಆರ್‌ಸಿ ಸ್ಟ್ರಾಸ್‌ಬರ್ಗ್ ಎದುರು ಡ್ರಾ ಸಾಧಿಸಿತು. ಈ ಮೂಲಕ ಒಂದು ಸುತ್ತು ಬಾಕಿ ಇರುವಂತೆಯೇ ಪಾಯಿಂಟ್ಸ್ ಆಧಾರದಲ್ಲಿ ಪ್ರಶಸ್ತಿ ಗೆದ್ದಿತು. ತಂಡವು 37 ಪಂದ್ಯಗಳಿಂದ 85 ಪಾಯಿಂಟ್ಸ್ ಕಲೆಹಾಕಿತು.

ಸೇಂಟ್ ಎಟೀನ್ಸ್ 10 ಬಾರಿ ಪ್ರಶಸ್ತಿ ಗೆದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ ಮೆಸ್ಸಿ 59ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಸ್ಟ್ರಾಸ್‌ಬರ್ಗ್ ತಂಡಕ್ಕಾಗಿ ಕೆವಿನ್ ಗಮೆರೊ 79ನೇ ನಿಮಿಷದಲ್ಲಿ ಸಮಬಲದ ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.