ಕೌಲಾಲಾಂಪುರ: ಭಾರತದಲ್ಲಿ ನಿಗದಿಯಾಗಿರುವ 2022ರ ಮಹಿಳಾ ಏಷ್ಯಾಕಪ್ ಫುಟ್ಬಾಲ್ ಟೂರ್ನಿಗೆ ನವೀ ಮುಂಬೈ, ಅಹಮದಾಬಾದ್ ಹಾಗೂ ಭುವನೇಶ್ವರ ಆತಿಥ್ಯ ವಹಿಸಲಿವೆ.

ಮುಂದಿನ ವರ್ಷದ ಜನವರಿ 20ರಿಂದ ಫೆಬ್ರುವರಿ 6ರವರೆಗೆ ಈ ಟೂರ್ನಿಯು ನಡೆಯಲಿದೆ. 2022ರ ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿಯೂ ಭಾರತದಲ್ಲೇ ಆಯೋಜನೆಯಾಗಲಿದೆ.

‘ಏಷ್ಯಾದಲ್ಲಿ ಮಹಿಳಾ ಫುಟ್ಬಾಲ್ ವಿಶ್ವದರ್ಜೆಯ ಮಟ್ಟದಲ್ಲಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಹಾಗೂ ಸ್ಥಳೀಯ ಆಯೋಜನಾ ಸಮಿತಿಯು ಏಷ್ಯಾಕಪ್ ಟೂರ್ನಿಗೆ ಸೂಕ್ತ ತಾಣಗಳನ್ನು ಆಯ್ಕೆ ಮಾಡಿದೆ‘ ಎಂದು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ನ (ಎಎಫ್ಸಿ) ಪ್ರಧಾನ ಕಾರ್ಯದರ್ಶಿ ಡ್ಯಾಟೊ ವಿಂಡ್ಸರ್ ಹೇಳಿದ್ದಾರೆ.

ನವೀ ಮುಂಬೈನ ಡಿ.ವೈ.ಪಾಟೀಲ್, ಅಹಮದಾಬಾದ್ನ ಟ್ರಾನ್ಸ್ಸ್ಟೇಡಿಯಾ ಹಾಗೂ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.