ಪೋರ್ಚುಗಲ್: ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ನೂತನ ವಿಶ್ವ ದಾಖಲೆ ಬರೆದಿದ್ದಾರೆ.

ಪೋರ್ಚುಗಲ್‌ನ ಸೂಪರ್ ಸ್ಟಾರ್ ರೊನಾಲ್ಡೊ, ಇರಾನ್‌ನ ಮಾಜಿ ದಿಗ್ಗಜ ಅಲಿ ದಾಯಿ (109 ಗೋಲು) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ:ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ಜೆರ್ಸಿ ಬಿಡುಗಡೆ ಮಾಡಿದ ‘ಮ್ಯಾಂಚೆಸ್ಟರ್ ಯುನೈಟೆಡ್‘

ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೊನಾಲ್ಡೊ, ದಾಖಲೆಯ 110ನೇ ಗೋಲು ಬಾರಿಸಿದ್ದಾರೆ. ಈ ಮೂಲಕ ಸರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿದ್ದಾರೆ.

ಇದರೊಂದಿಗೆ ಐರ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಲು ನೆರವಾದರು. 89ನೇ ನಿಮಿಷ ಹಾಗೂ ಇಂಜುರಿ ಟೈಮ್‌ನಲ್ಲಿ ಗೋಲು ಬಾರಿಸಿದ ರೊನಾಲ್ಡೊ ಮಿಂಚಿನ ಆಟ ಪ್ರದರ್ಶಿಸಿದರು.

36ರ ಹರೆಯದ ರೊನಾಲ್ಡೊ, ಇತ್ತೀಚೆಗಷ್ಟೇ ಜ್ಯುವೆಂಟಸ್ ತಂಡವನ್ನು ತೊರೆದು ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.