ನವದೆಹಲಿ: ಮುಂಬರುವ ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್‌ನ 19 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ 23 ಆಟಗಾರ್ತಿಯರ ತಂಡವನ್ನು ಭಾರತ ತಂಡದ ಮುಖ್ಯ ಕೋಚ್ ಶುಕ್ಲಾ ದತ್ತಾ ಸೋಮವಾರ ಪ್ರಕಟಿಸಿದ್ದಾರೆ. ಈ ಚಾಂಪಿಯನ್‌ಷಿಪ್ ಢಾಕಾದಲ್ಲಿ ಶುಕ್ರವಾರ ಆರಂಭವಾಗಲಿದೆ.

ಭಾರತ ತಂಡ ಮಂಗಳವಾರ ಢಾಕಾಕ್ಕೆ ತೆರಳಲಿದ್ದು, ಫೆಬ್ರುವರಿ 2ರಂದು ತನ್ನ ಮೊದಲ ಪಂದ್ಯವನ್ನು ಭೂತಾನ್ ವಿರುದ್ಧ ಆಡಲಿದೆ. ನಂತರ 4ರಂದು ಬಾಂಗ್ಲಾದೇಶ ವಿರುದ್ಧ, 6ರಂದು ನೇಪಾಳ ವಿರುದ್ಧ ಆಡಲಿದೆ. 8ರಂದು ಫೈನಲ್ ನಿಗದಿಯಾಗಿದೆ. ಎಲ್ಲ ಪಂಧ್ಯಗಳು ಬಿಎಸ್‌ಎಸ್‌ಎಸ್ ಮೊಸ್ತಾಫಾ ಕಮಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡ, 19 ವರ್ಷದೊಳಗಿನವರ ವಿಭಾಗದಲ್ಲಿ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, 2021ರಲ್ಲಿ ರನ್ನರ್ ಅಪ್ ಆಗಿತ್ತು. ಬಾಂಗ್ಲಾದೇಶ ಚಾಂಪಿಯನ್ ಆಗಿತ್ತು.

ಭಾರತ ತಂಡ: ಗೋಲ್‌ಕೀಪರ್ಸ್: ಖುಷಿ ಕುಮಾರಿ, ಅನಿಕಾ ದೇವಿ ಶರುಬಂ ಮತ್ತು ಹೇಮಪ್ರಿಯಾ ಸರೆಮ್. ಡಿಫೆಂಡರ್ಸ್: ಹೀನಾ ಖಾತುನ್, ವಿಕ್ಷಿತ್ ಬರಾ, ಸೊನಿಬಿಯಾ ದೇವಿ ಐರೊಂ, ಜೂಹಿ ಸಿಂಗ್ ಮತ್ತು ನಿಶಿಮಾ ಕುಮಾರಿ. ಮಿಡ್‌ಫೀಲ್ಡರ್ಸ್: ಶಿವಾಣಿ ಟೊಪ್ಪೊ, ಲಲಿತಾ ಬೊಯ್‌ಪಾಯಿ, ಅಖಿಲಾ ರಾಜನ್, ರಿವ್ಕಾ ರಾಮ್ಜಿ, ಅರಿನಾ ದೇವಿ ನಮೀರಾಕಪಂ, ಸಿಂಡಿ ರೆಮ್ರುವಾತ್‌ಪುಯಿ ಕೊಲ್ನಿ , ಮೇನಕಾ ದೇವಿ ಲೊರೆಂಬಮ್, ಶಿವಾನಿ ದೇವಿ ನೊಂಗ್‌ಮೀಕರಪಂ ಮತ್ತು ತೊಯಿಬಿಸಾನ ಚಾನು ಟೊಯ್ಜಾಂ. ಫಾರ್ವರ್ಡ್ಸ್: ಬಬಿತಾ ಕುಮಾರಿ, ನಿತು ಲಿಂಡಾ, ಸುಲಂಜನಾ ರಾವುಲ್, ನೇಹಾ ಮತ್ತು ಪೂಜಾ, ಸಹೆನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.