ಮಿಯಾಮಿ ಗಾರ್ಡನ್: ಹದಿನೈದು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡವು ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಕೊಲಂಬಿಯಾ ತಂಡವನ್ನು ಎದುರಿಸಲಿದೆ.

ಸೋಮವಾರ (ಭಾರತೀಯ ಕಾಲಮಾನ) ಫ್ಲೋರಿಡಾದಲ್ಲಿ ನಡೆಯುವ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಲಯೊನೆಲ್ ಮೆಸ್ಸಿ ಬಳಗವು ದಾಖಲೆಯ 16ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಪ್ರಸ್ತುತ, ಉರುಗ್ವೆ ತಂಡದೊಂದಿಗೆ (15 ಪ್ರಶಸ್ತಿ) ಗರಿಷ್ಠ ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿದೆ.

ಕಳೆದ ಆವೃತ್ತಿಯ (2021) ಫೈನಲ್ನಲ್ಲಿ ಬ್ರೆಜಿಲ್ ತಂಡವನ್ನು 1–0ಯಿಂದ ಮಣಿಸಿ ಪ್ರಶಸ್ತಿಯನ್ನು ಗೆದ್ದಿರುವ ಅರ್ಜೆಂಟೀನಾ, 2022ರ ಫಿಫಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್ನಲ್ಲಿ ಕೊಲಂಬಿಯಾ ವಿರುದ್ಧ ಗೆದ್ದರೆ ಪ್ರಮುಖ ಟೂರ್ನಿಗಳಲ್ಲಿ ಸತತ ಮೂರು ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಲಿದೆ. ಇಂತಹದೇ ಸಾಧನೆಯನ್ನು ಈ ಹಿಂದೆ ಸ್ಪೇನ್ ತಂಡ ಮಾಡಿತ್ತು. 2008 ಮತ್ತು 2012ರಲ್ಲಿ ಯುರೋ ಕಪ್ ಗೆದ್ದಿರುವ ಸ್ಪೇನ್, 2010ರಲ್ಲಿ ವಿಶ್ವಕಪ್ ಜಯಿಸಿತ್ತು.

‘ನಾವು ಯಾವಾಗಲೂ ಒಂದೇ ರೀತಿಯಲ್ಲಿ ಆಡಲು ಪ್ರಯತ್ನಿಸುತ್ತೇವೆ. ನಮ್ಮ ತಂಡ ಸಮತೋಲನದಲ್ಲಿದ್ದು, ಫೈನಲ್ ಪಂದ್ಯವನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನ ನಡೆಸಲಿದೆ’ ಎಂದು ಅರ್ಜೆಂಟೀನಾ ಕೋಚ್ ಲಯೋನೆಲ್ ಸ್ಕಾಲೋನಿ ಹೇಳಿದರು.

ಮತ್ತೊಂದೆಡೆ, ಕೊಲಂಬಿಯಾ ತಂಡವು 23 ವರ್ಷಗಳ ಬಳಿಕ ಮತ್ತೆ ಕಿರೀಟ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದೆ. 2001ರಲ್ಲಿ ಆತಿಥ್ಯ ವಹಿಸಿದ್ದ ಕೊಲಂಬಿಯಾ ತಂಡವು ಫೈನಲ್ನಲ್ಲಿ 1–0ಯಿಂದ ಮೆಕ್ಸಿಕೊ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು.

ಸೆಮಿಫೈನಲ್ನ ರೋಚಕ ಹಣಾಹಣಿಯಲ್ಲಿ ತಂಡದ ಪ್ರಮುಖ ಆಟಗಾರ ಡೇನಿಯಲ್ ಮುನೋಜ್ ಕೆಂಪು ಕಾರ್ಡ್ ಪಡೆದರೂ ಕೊಲಂಬಿಯಾ 1–0ಯಿಂದ ಬಲಿಷ್ಠ ಉರುಗ್ವೆ ತಂಡವನ್ನು ಮಣಿಸಿ ಫೈನಲ್ಗೆ ತಲುಪಿದೆ. ಅಲ್ಲದೆ, ಸತತ ಗೆಲುವಿನ ಸರಣಿಯನ್ನು 28 ಪಂದ್ಯಗಳಿಗೆ ವಿಸ್ತರಿಸಿಕೊಂಡಿತು. ತಂಡವು 2022ರ ಫೆಬ್ರುವರಿಯಲ್ಲಿ ಕೊನೆಯ ಬಾರಿ ಅರ್ಜೆಂಟೀನಾ ವಿರುದ್ಧವೇ ಸೋತಿತ್ತು.

‘ಫೈನಲ್ನಲ್ಲಿ ಎದುರಾಳಿ ಯಾರೆಂದು ನಮಗೆ ತಿಳಿದಿದೆ. ತಂಡಕ್ಕೆ ಮೇಲುಗೈ ಸಾಧಿಸಲು ಅವಕಾಶವಿದೆ. ವಿಶ್ವ ಚಾಂಪಿಯನ್ ತಂಡದ ವಿರುದ್ಧದ ಪಂದ್ಯವನ್ನು ನಾವು ಆನಂದಿಸಲು ಎದುರು ನೋಡುತ್ತಿದ್ದೇವೆ’ ಎಂದು ಕೊಲಂಬಿಯಾ ಕೋಚ್ ನೆಸ್ಟರ್ ಲೊರೆಂಜೊ ಹೇಳಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 5.30 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.