ನವದೆಹಲಿ: ‘ಭಾರತ ಫುಟ್ಬಾಲ್ ತಂಡದ ಪದಚ್ಯುತ ಕೋಚ್ ಇಗೊರ್ ಸ್ಟಿಮಾಚ್ ಅವರು ದೇಶದ ಫುಟ್ಬಾಲ್ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಆರೋಪಿಸಿದೆ.

ಎಐಎಫ್ಎಫ್ ವಿರುದ್ಧ ಸ್ಟಿಮಾಚ್ ಮಾಡಿದ ಸರಣಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಫೆಡರೇಷನ್, ತಂಡದ ಪ್ರದರ್ಶನ ಮಟ್ಟ ಹೆಚ್ಚಿಸಲು ಅವರು ಕೇಳಿದ ಎಲ್ಲವನ್ನೂ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದೆ.

‘ವಜಾ ಮಾಡಿದ ನಾಲ್ಕು ದಿನಗಳ ನಂತರ ಪತ್ರಿಕಾಗೋಷ್ಠಿಯನ್ನು ಕರೆಯುವ ಅವರ ಏಕೈಕ ಉದ್ದೇಶವು ಫೆಡರೇಷನ್ ಅನ್ನು ಕೆಟ್ಟದಾಗಿ ಬಿಂಬಿಸುವುದಾಗಿದೆ’ ಎಂದು ಎಐಎಫ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

‘ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ತಮ್ಮ ಸ್ಥಾನದಿಂದ ಎಷ್ಟು ಬೇಗ ನಿರ್ಗಮಿಸುವರೊ, ದೇಶದ ಫುಟ್ಬಾಲ್ ಭವಿಷ್ಯಕ್ಕೆ ಅಷ್ಟು ಒಳಿತಾಗಲಿದೆ’ ಎಂದು ಸ್ಟಿಮಾಚ್ ಎರಡು ದಿನಗಳ ಹಿಂದೆ ವಾಗ್ದಾಳಿ ನಡೆಸಿದ್ದರು.

‘ಪಂದ್ಯ ನಡೆಯುವ ಸ್ಥಳಗಳ ಆಯ್ಕೆ, ನೆರವು ಸಿಬ್ಬಂದಿ ಆಯ್ಕೆ, ಪ್ರಯಾಣದ ದಿನಗಳಿಗೆ ಸಂಬಂಧಿಸಿ ತಂಡದ ಮ್ಯಾನೇಜರ್ ಜೊತೆ ಸಂವಹನ ನಡೆಸಲು ಸ್ಟಿಮಾಚ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು’ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.