ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Copa America: ಬ್ರೆಜಿಲ್ ಕನಸು ಭಗ್ನ, ಸೆಮಿಫೈನಲ್‌ಗೆ ಉರುಗ್ವೆ ಲಗ್ಗೆ

Published : 7 ಜುಲೈ 2024, 10:09 IST
Last Updated : 7 ಜುಲೈ 2024, 10:09 IST
ಫಾಲೋ ಮಾಡಿ
Comments

ಲಾಸ್ ವೇಗಾಸ್: ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಉರುಗ್ವೆ ಲಗ್ಗೆ ಇಟ್ಟಿತು.

ಇಂದು ನಡೆದ ರೋಚಕ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಉರುಗ್ವೆ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಬ್ರೆಜಿಲ್ ವಿರುದ್ಧ 4-2 ಗೋಲುಗಳ ಅಂತರದಿಂದ ಗೆದ್ದಿತು.

ಇದರೊಂದಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಪ್ರಶಸ್ತಿ ಕನಸು ಭಗ್ನಗೊಂಡಿತು.

ನಿಗದಿತ ಅವಧಿಯಲ್ಲಿ ಇತ್ತಂಡಗಳಿಗೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಬಳಿಕ ವಿಜೇತರನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು.

ಉರುಗ್ವೆಯ ನಹಿತಾನ್‌ ನಾಂಡೆಜ್‌ಗೆ 74ನೇ ನಿಮಿಷದಲ್ಲಿ ಅಂಪೈರ್‌ ಕೆಂಪುಕಾರ್ಡ್‌ ನೀಡಿದರು. ಹೀಗಾಗಿ ಪಂದ್ಯದುದ್ದಕ್ಕೂ ಅವರು ಹೊರಗುಳಿಯಬೇಕಾಯಿತು. ಉರುಗ್ವೆ ತಂಡವು 10 ಆಟಗಾರರೊಂದಿಗೆ ಆಡಿತು. 

2019ರ ಕೊಪಾ ಅಮೆರಿಕ ಚಾಂಪಿಯನ್ ಆಗಿದ್ದ ಬ್ರೆಜಿಲ್, 2021ರಲ್ಲಿ ರನ್ನರ್ ಅಪ್ ಎನಿಸಿಕೊಂಡಿತ್ತು. ಮತ್ತೊಂದೆಡೆ ಉರುಗ್ವೆ 2011ರಲ್ಲಿ ಕೊಪಾ ಅಮೆರಿಕ ಗೆದ್ದಿತ್ತು.

ಸೆಮಿಫೈನಲ್ ಮುಖಾಮುಖಿ ಹೀಗಿದೆ...

ಜುಲೈ 10, ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೇಂಟೀನಾ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿವೆ.

ಜುಲೈ 11, ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ಹಾಗೂ ಕೊಲಂಬಿಯಾ ತಂಡಗಳು ಸೆಣಸಲಿವೆ. ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಆರಂಭವಾಗಲಿದೆ.

ಕೊಲಂಬಿಯಾ ತಂಡ ಕಳೆದ 27 ಪಂದ್ಯಗಳಲ್ಲಿ ಸೋತಿಲ್ಲ. ಅರಿಜೋನಾದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ 5–0 ಯಿಂದ ಪನಾಮಾ ತಂಡವನ್ನು ಪರಾಭವಗೊಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT