ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪಾ ಅಮೆರಿಕ ಸೆಮಿಫೈನಲ್: ಡಾರ್ವಿನ್‌ ನ್ಯೂನೆಝ್‌ಗೆ 5 ಪಂದ್ಯ ನಿಷೇಧ

Published : 29 ಆಗಸ್ಟ್ 2024, 0:14 IST
Last Updated : 29 ಆಗಸ್ಟ್ 2024, 0:14 IST
ಫಾಲೋ ಮಾಡಿ
Comments

ಅಸುನ್ಸಿಯಾನ್ (ಉರುಗ್ವೆ): ಅಮೆರಿಕದಲ್ಲಿ ನಡೆದ ಕೊಪಾ ಅಮೆರಿಕ ಸೆಮಿಫೈನಲ್ ಪಂದ್ಯದ ನಂತರ ಪ್ರೇಕ್ಷಕರ ಗುಂಪಿನ ಜೊತೆ ಗಲಾಟೆಯಲ್ಲಿ ತೊಡಗಿದ್ದಕ್ಕೆ ಉರುಗ್ವೆಯ ಪ್ರಮುಖ ಫಾರ್ವರ್ಡ್‌ ಆಟಗಾರ ಡಾರ್ವಿನ್ ನ್ಯೂನೆಝ್ ಅವರಿಗೆ ಬುಧವಾರ ದಕ್ಷಿಣ ಆಫ್ರಿಕಾ ಫುಟ್‌ಬಾಲ್‌ ಒಕ್ಕೂಟ ಐದು ಪಂದ್ಯಗಳ ನಿಷೇಧ ಹೇರಿದೆ.

ಒಟ್ಟು 11 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವರಲ್ಲಿ ನಾಲ್ವರು ಆಟಗಾರರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ನ್ಯೂನೆಝ್ ಬಿಟ್ಟರೆ ಉಳಿದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಿದ್ದು, ಕೆಲವರಿಗೆ ನಾಲ್ಕು, ಕೆಲವರಿಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿದೆ. ನ್ಯೂನೆಝ್‌ಗೆ ₹17 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಆರು ಮಂದಿಗೆ ₹13 ಲಕ್ಷ ಮತ್ತು ಅದಕ್ಕಿಂತ ಕಡಿಮೆ ದಂಡ ಹೇರಲಾಗಿದೆ.

ಜುಲೈ 11ರಂದು ನಾರ್ತ್ ಕೆರೊಲಿನಾದ ಚಾರ್ಲೊಟೆಯ ಬ್ಯಾಂಕ್‌ ಆಫ್‌ ಅಮೆರಿಕಾ ಕ್ರೀಡಾಂಗಣದಲ್ಲಿ ಕೊಲಂಬಿಯಾ ವಿರುದ್ಧ ಉರುಗ್ವೆ ಸೋತ ನಂತರ ಆಕ್ರೋಶಗೊಂಡ ಅಭಿಮಾನಿಗಳ ಮಧ್ಯೆ ಗಲಾಟೆ ನಡೆದಾಗ ಉರುಗ್ವೆ ಆಟಗಾರರು ಪ್ರೇಕ್ಷಕರ ಸ್ಟ್ಯಾಂಡ್‌ಗೆ ನುಗ್ಗಿದ್ದರು. ನ್ಯೂನೆಝ್ ಒಬ್ಬರಿಗೆ ಗುದ್ದುಗಳನ್ನು ಹೊಡೆದಿದ್ದರು.

ಈ ಹಿಂಸಾತ್ಮಕ ಘಟನೆಯ ಬಗ್ಗೆ ವಿಚಾರಣೆ ನಡೆಸಲಾಗಿತ್ತು.

ಉರುಗ್ವೆ ಫುಟ್‌ಬಾಲ್‌ ಫೆಡರೇಷನ್‌ಗೂ ₹17 ಲಕ್ಷ ದಂಡ ವಿಧಿಸಲಾಗಿದ್ದು, ಅದನ್ನು ಟೂರ್ನಿಯ ವರಮಾನ ಮತ್ತು ಬಹುಮಾನ ಹಣದಿಂದ ಕಳೆಯಲಾಗುತ್ತದೆ. ನಿಷೇಧ ಶಿಕ್ಷೆಯಿಂದ ಈ ಆಟಗಾರರು ವಿಶ್ವಕಪ್ ಅರ್ಹತಾ ಸುತ್ತಿನ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT