ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವೀಡನ್ ವಿರುದ್ಧ ಡೇವಿಸ್‌ ಕಪ್ ಪಂದ್ಯ ಇಂದಿನಿಂದ

Published : 13 ಸೆಪ್ಟೆಂಬರ್ 2024, 22:47 IST
Last Updated : 13 ಸೆಪ್ಟೆಂಬರ್ 2024, 22:47 IST
ಫಾಲೋ ಮಾಡಿ
Comments

ಸ್ಟಾಕ್‌ಹೋಮ್‌: ಸತತ ಎರಡನೇ ಡೇವಿಸ್‌ ಕಪ್ ಪಂದ್ಯದಲ್ಲಿ ಭಾರತವು ಡಬಲ್ಸ್‌ ಪರಿಣತ ಎನ್‌.ಶ್ರೀರಾಮ್ ಬಾಲಾಜಿ ಅವರ ಸಿಂಗಲ್ಸ್‌ ಸಾಮರ್ಥ್ಯದ ಮೇಲೆ ವಿಶ್ವಾಸ ಇರಿಸಿಕೊಂಡಿದೆ. ಸ್ವೀಡನ್ ವಿರುದ್ಧ ವಿಶ್ವ ಗುಂಪಿನ (ಒಂದು) ಪಂದ್ಯದಲ್ಲಿ ಅವರನ್ನು ಮೊದಲ ದಿನವಾದ ಶನಿವಾರ ಕಣಕ್ಕೆ ಇಳಿಸಲು ನಾಯಕ ರೋಹಿತ್ ರಾಜಪಾಲ್ ನಿರ್ಧರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಈ ವರ್ಷದ ಆರಂಭದಲ್ಲಿ ಗ್ರಾಸ್‌ಕೋರ್ಟ್‌ನಲ್ಲಿ ಆಡಿ ಜಯಗಳಿಸಿದ್ದ ಬಾಲಾಜಿ, ಈ ಬಾರಿ ಒಳಾಂಗಣ ಕ್ರೀಡಾಂಗಣದಲ್ಲಿ ಸ್ವೀಡನ್‌ನ ಅಗ್ರಮಾನ್ಯ ಆಟಗಾರ ಎಲಿಯಾಸ್ ಯೀಮರ್ ಅವರನ್ನು ಎದುರಿಸಲಿದ್ದಾರೆ. ಯೀಮರ್ ಅವರು ವಿಶ್ವ ಕ್ರಮಾಂಕದಲ್ಲಿ 238ನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಅಗ್ರ ಆಟಗಾರ ರಾಮಕುಮಾರ್‌ ರಾಮನಾಥನ್ ಅವರು ಲಿಯೊ ಬೋರ್ಗ್ ವಿರುದ್ಧ ಆಡಲಿದ್ದಾರೆ. ಲಿಯೊ ಅವರು ಟೆನಿಸ್‌ ದಂತಕತೆ ಬ್ಯೋನ್‌ ಬೋರ್ಗ್ ಅವರ ಪುತ್ರ. ರ್‍ಯಾಂಕಿಂಗ್‌ನಲ್ಲಿ 603ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರಿಗೆ ಇದು ಮೊದಲ ಮುಖಾಮುಖಿ.

ರಾಮಕುಮಾರ್ ಮತ್ತು ಬಾಲಾಜಿ ಅವರು ಭಾನುವಾರ ಡಬಲ್ಸ್‌ನಲ್ಲೂ (ಫಿಲಿಪ್‌ ಬೆರ್ಗೆವಿ ಮತ್ತು ಆಂಡ್ರೆ ಗೊರಾನ್ಸನ್‌) ವಿರುದ್ಧ ಆಡಲಿದ್ದಾರೆ. ಮೊದಲ ದಿನದ ಕೊನೆಗೆ ಸ್ಕೋರ್‌ 1–1 ಆದಲ್ಲಿ ಡಬಲ್ಸ್‌ ಜೋಡಿಯಲ್ಲಿ ಬದಲಾವಣೆ ಆಗಬಹುದು.

ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಗಾಲ್ ಅವರು ಬೆನ್ನುನೋವಿನ ಕಾರಣ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT